ಕೊಂಕಣಿ ಲೇಖಕರ ಸಂಘ, ಕರ್ನಾಟಕ – ವಾರ್ಷಿಕ ಸಭೆ

Upayuktha
0


ಮಂಗಳೂರು: ಕೊಂಕಣಿ ಲೇಖಕರ ಸಂಘ, ಕರ್ನಾಟಕದ ವಾರ್ಷಿಕ ಸಭೆ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಸಂಘದ ಸಂಚಾಲಕರಾದ ರಿಚ್ಚಾರ್ಡ್ ಮೊರಾಸ್ ಖರ್ಚು– ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.


ಮುಖ್ಯ ಆಕರ್ಷಣೆಯಾಗಿ ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ IPS ಅವರೊಂದಿಗೆ ಖ್ಯಾತ ಕವಿ–ಲೇಖಕ ಅ್ಯಂಡ್ರು ಎಲ್. ಡಿಕುನ್ಹಾ ಮುಕ್ತ ಸಂವಾದ ನಡೆಸಿದರು. ಡಾ. ಲೋಬೊ ಅವರ ವೃತ್ತಿ ಜೀವನ, ಆಡಳಿತ ಸಾಧನೆಗಳು ಹಾಗೂ ಕೊಂಕಣಿ ಭಾಷೆ–ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು.


ಸಭೆಗೆ ಡೊಲ್ಫಿ ಕಾಸ್ಸಿಯಾ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಹೆನ್ರಿ ಮಸ್ಕರೇನಸ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಅ್ಯನಿ ಕ್ಯಾಸ್ತಲಿನೊ ನುಡಿಗಟ್ಟುಗಳೊಂದಿಗೆ ಸುಂದರವಾಗಿ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top