ಕರ್ಣಾಟಕ ಬ್ಯಾಂಕ್ ನಿಂದ ಧರ್ಮಸ್ಥಳಕ್ಕೆ “ಟೆಂಪೊ ಟ್ರಾವೆಲ್ಲರ್” ವಾಹನ ಕೊಡುಗೆ

Chandrashekhara Kulamarva
0


ಕರ್ಣಾಟಕ ಬ್ಯಾಂಕ್ ವತಿಯಿಂದ ಸೋಮವಾರ ಧರ್ಮಸ್ಥಳಕ್ಕೆ “ಟೆಂಪೊ ಟ್ರಾವೆಲ್ಲರ್” ವಾಹನ ಒಂದನ್ನು ಕೊಡುಗೆಯಾಗಿ ಅರ್ಪಿಸಿದರು.


ಉಜಿರೆ: ಕರ್ಣಾಟಕ ಬ್ಯಾಂಕ್ ವತಿಯಿಂದ ಸೋಮವಾರ ಧರ್ಮಸ್ಥಳಕ್ಕೆ ವಾಹನವನ್ನು ಕೊಡುಗೆಯಾಗಿ ಅರ್ಪಿಸಿದರು.


ಕರ್ಣಾಟಕ ಬ್ಯಾಂಕಿನ ಎಂ.ಡಿ. ಮತ್ತು ಸಿ.ಇ.ಒ ರಾಘವೇಂದ್ರ ಶ್ರೀನಿವಾಸ ಭಟ್, ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ  ವಾದಿರಾಜ ಭಟ್ ಮತ್ತು ಉಡುಪಿ ರಥಬೀದಿ ಶಾಖೆಯ ಹಿರಿಯ ಶಾಖಾ ಪ್ರಬಂಧಕ ಪ್ರಶಾಂತ್ ಎಂ. ರಾವ್ ವಾಹನವನ್ನು ಕೊಡುಗೆಯಾಗಿ ನೀಡಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಶ್ರೀ ಜಗದೀಶ್, ಮ್ಯಾನೇಜರ್, ಫೋರ್ಸ್ ಮೋಟಾರ್ಸ್. ಮನೀಶ್ ಫೋರ್ಸ್ ಸೇಲ್ಸ್ ಎಕ್ಸಿಕ್ಯುಟಿವ್ ಫೋರ್ಸ್ ಮೋಟಾರ್ಸ್, ಆಕಾಶ್ ಸೇಲ್ಸ್ ಎಕ್ಸಿಕ್ಯುಟಿವ್ ಫೋರ್ಸ್ ಮೋಟಾರ್ಸ್ ಉಪಸ್ಥಿತರಿದ್ದರು.


ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆಯವರು ಬ್ಯಾಂಕಿಗೆ ಕೃತಜ್ಞತೆ ಸಲ್ಲಿಸಿ ಈ ವಾಹನವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಗಳಿಗೆ  ಬಳಸಲಾಗುವುದು ಎಂದು ಹೇಳಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top