ಬೆಂಗಳೂರು: ನವರಾತ್ರಿಯ ಶುಭ ದಿನದಂದು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯು ಕೆಂಗೇರಿ ಉಪನಗರದ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಭವ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಚಂದ್ರ ಮೊಗವೀರ್, ಶರತ್ ಕುಮಾರ್, ರಣರಾಗಿಣಿ ಜಿಲ್ಲಾ ಸಂಯೋಜಕರಾದ ಸೌ. ಭವ್ಯ ಮೋಹನ ಗೌಡ, ವರಸಿದ್ಧಿ ವಿನಾಯಕ ದೇವಾಲಯದ ಅಧ್ಯಕ್ಷರಾದ ಶ್ರೀ ಕದ್ರಪ್ಪ, ಹಾಗೂ ಶಾಖೆಯ ಸೇವಕರಾದ ಸೌ. ಸೌಮ್ಯ ಗೌಡ ಮತ್ತು ಸೌ. ಲಕ್ಷ್ಮಿ ಉಪಸ್ಥಿತರಿದ್ದರು. 25ಕ್ಕೂ ಹೆಚ್ಚು ರಣರಾಗಿಣಿ ಮಹಿಳಾ ಶಾಖೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೌ. ಭವ್ಯ ಮೋಹನ ಗೌಡ ಅವರು, ಹಿಂದೂ ಜನಜಾಗೃತಿ ಸಮಿತಿಯು ನವರಾತ್ರಿಯ ಶುಭದಿನದಂದು ಸ್ಥಾಪಿತವಾಗಿ, ಕಳೆದ 23 ವರ್ಷಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಇದುವರೆಗೆ 200 ಹಿಂದೂ ರಾಷ್ಟ್ರ ಅಧಿವೇಶನಗಳು, 2250 ಹಿಂದೂ ರಾಷ್ಟ್ರ ಸಭೆಗಳು, ಹಾಗೂ 1000ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಒಕ್ಕೂಟದ ಮೂಲಕ 25 ಲಕ್ಷ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಲಾಗಿದೆ. 300ಕ್ಕೂ ಅಧಿಕ ಧರ್ಮಶಿಕ್ಷಣ ವರ್ಗಗಳ ಮೂಲಕ ಸಾವಿರಾರು ಜನರಿಗೆ ಹಿಂದೂ ಧರ್ಮದ ಶಿಕ್ಷಣ ನೀಡಲಾಗಿದೆ.
ಮಹಿಳೆಯರ ರಕ್ಷಣೆಗೆ ಸ್ವಸಂರಕ್ಷಣೆ ವರ್ಗಗಳು, ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನಗಳು, ಹಾಗೂ ಸಮಾಜದ ಅನಿಷ್ಠಗಳಾದ ಅಶ್ಲೀಲತೆ ವಿರುದ್ಧ ಹೋರಾಟಗಳು ನಡೆಸಲ್ಪಟ್ಟಿವೆ. ರಣರಾಗಿಣಿ ಮಹಿಳಾ ಶಾಖೆಯು ಇನ್ನು ಮುಂದೆ ನಗರದಲ್ಲಿ ಇನ್ನಷ್ಟು ಕಾರ್ಯಗಳನ್ನು ವಿಸ್ತರಿಸಿ ಧರ್ಮರಕ್ಷಣೆಗೆ ಶ್ರಮಿಸುತ್ತದೆ ಎಂದು ಕರೆ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

