ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯಲ್ಲಿ ಏಕಾಹ ಭಜನಾ ಸಮಿತಿ ಕಲಾಕುಂಚ ಗಡಿನಾಡ ಶಾಖೆಯ ಸಂಯುಕ್ತಾಶ್ರಯದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ವನ್ನು ಸೆಪ್ಟೆಂಬರ್ 29 ರಿಂದ 2-10-2025 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ತಿಳಿಸಿದ್ದಾರೆ.
4 ದಿನಗಳ ಕಾಲ ಮಂಗಲ್ಪಾಡಿಯಲ್ಲಿ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ಪಂಚಗವ್ಯ, ಪುಣ್ಯಾಹ, ಗಣಪತಿ ಹೋಮ, ಶ್ರೀ ಶಾರದಾ ವಿಗ್ರಹ ಪ್ರತಿಷ್ಠಾಪನೆ, ಧ್ವಜಾರೋಹಣ ಸಾಮೂಹಿಕ ಭಜನೆ, ಗಮಕ ವಾಚನ, ಗಾನ ವೈವಿಧ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ಅಮೃತ ವಚನ, ಭಕ್ತಿನಾದ ತರಂಗಿಣಿ, ಸಮೂಹ ನೃತ್ಯ ಸ್ಪರ್ಧೆ ವಿಜೇತರಿಗೆ ನಾಮಫಲಕ, ನಗದು ಬಹುಮಾನ ಕೊನೆಯಲ್ಲಿ ವಿಸರ್ಜನಾ ಶೋಭಾಯಾತ್ರೆ ದಾವಣಗೆರೆ ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಈ ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಮಿತಿಯ ಸದಸ್ಯರು, ಪದಾಧಿಕಾರಿಗಳು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


