ಫಿಶರೀಸ್ ಶಾಲೆ ಕುಳಾಯಿ: ನವರಾತ್ರಿ-ಪುಸ್ತಕ ಪೂಜೆ

Upayuktha
0


ಕುಳಾಯಿ: ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿ ಇಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪುಸ್ತಕ ಪೂಜೆ, ವಿದ್ಯಾರ್ಥಿಗಳಿಂದ ಕೀರ್ತನೆಗಳು ನಡೆದವು. ಶ್ರವಣ ತಂತ್ರಿ ಕಾಪು ಪೂಜೆ ನೇರವೇರಿಸಿದರು. ನಿವೃತ್ತ ಶಿಕ್ಷಕಿ ಪುಷ್ಪಾವತಿ ಮತ್ತು ಶ್ರೀನಿವಾಸ ರಾವ್ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಭಜನೆ ನಡೆಸಿದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಜುಳ, ಸದಸ್ಯೆ ಶಶಿಕಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ, ಕಾರ್ಯದರ್ಶಿ ಕೃಷ್ಣಮೂರ್ತಿ, ಸದಸ್ಯ ತೇಜಪಾಲ್ ಪುತ್ರನ್, ಮುಖ್ಯ ಶಿಕ್ಷಕಿ ಶೋಭಾ, ಶಿಕ್ಷಕಿ ರೂಪ ಮತ್ತು ಸಿಬ್ಬಂದಿ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Post a Comment

0 Comments
Post a Comment (0)
To Top