ಇಂದು ನಮ್ಮ ಮನೆಗೆ ಆರ್ಥಿಕ ಸಾಮಾಜಿಕ ಜಾತಿ ಸಮೀಕ್ಷೆ ಮಾಡಲು ಬಂದಿದ್ದರು. ನಾನು ದೇವರ ಪೂಜೆ ಮಾಡುತ್ತಾ ಕುಳಿತುಕೊಂಡಿದ್ದೆ. ನಮ್ಮಿಬ್ಬರ ಸಂಭಾಷಣೆ ಈ ರೀತಿ ಇತ್ತು...
ಸಮೀಕ್ಷೆದಾರರು- ನಮಸ್ಕಾರ ಗುರುಗಳೇ
ನಾನು - ಬನ್ನಿ... ಕಾಲು ತೊಳೆದು ಒಳಗೆ ಬನ್ನಿ, ಕುಳಿತುಕೊಳ್ಳಿ
ಸಮೀ- ನಾವು ಸಮೀಕ್ಷೆ ಮಾಡಲು ಬಂದಿದ್ದೇವೆ. ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ.
ನಾನು - ಮೊದಲು ಪಂಚಗವ್ಯ ತೆಗೆದುಕೊಳ್ಳಿ. ಇದು ಆತಿಥ್ಯ. ನಮ್ಮ ಮನೆಯ ಸಂಪ್ರದಾಯ
ಸಮೀ- ತಮ್ಮ ಹೆಸರು...
ನಾನು - ನನ್ನ ಹೆಸರು ಪ್ರಾಣೇಶಾಚಾರ... ಜಮದಗ್ನಿ ಗೋತ್ರ, ಮೇಷ ರಾಶಿ, ಅಶ್ವಿನಿ ನಕ್ಷತ್ರ
ಸಮೀ- ಏನು ಓದಿದ್ದೀರಿ...
ನಾನು - ರಘುವಂಶ, ಕುಮಾರ ಸಂಭವ, ಮಣಿಮಂಜರಿ, ಗದುಗಿನ ಭಾರತ, ಮೇಘದೂತ, ಅಭಿಜ್ಞಾನ ಶಾಕುಂತಲ, ತೊರವೆ ರಾಮಾಯಣ, ಇತ್ಯಾದಿ... ಈಗ ಎಲ್ಲಕ್ಕಿಂತ ಮುಖ್ಯವಾಗಿ ಸುಮಧ್ವವಿಜಯ
ಸಮೀ- ತಮ್ಮ ಉದ್ಯೋಗ...
ನಾನು - ಹರಿಕಥೆ, ಪೌರೋಹಿತ್ಯ, ಸಂಸ್ಕೃತ ಗುರುಕುಲ
ಸಮೀ- ತಮ್ಮ ಮನೆಯಲ್ಲಿ ಯಾರು ಯಾರು ಇರುತ್ತೀರಿ
ನಾನು - ನಮ್ಮ ಮನೆಯಲ್ಲಿ ಲಕ್ಷ್ಮೀ ನಾರಾಯಣ, ವಾಯುದೇವರು, ಗರುಡ ಶೇಷ ರುದ್ರ, ಅವರವರ ನಿಯತ ಪತ್ನಿಯರು, ಇಂದ್ರಾದಿ ಸಮಸ್ತ ಪರಿವಾರ ದೈವಗಳು, ತತ್ವಾಭಿಮಾನಿ ದೇವತೆಗಳು, ಯತಿಗಳು, ದಾಸರು, ಭಗವದ್ ಭಕ್ತರು
ಸಮೀ- ತಮ್ಮ ಆದಾಯ
ನಾನು - ಯಾದೃಚ್ಛಾ ಲಾಭ ಸಂತುಷ್ಟೋ .... ದೇವರ ಆಶೀರ್ವಾದವೇ ಆದಾಯ
ಸಮೀ-ತಮ್ಮ ಚರಾಸ್ತಿ ಸ್ಥಿರಾಸ್ತಿ
ನಾನು - ಸ್ಥಿರಾಸ್ತಿ ೫ ಸಾಲಿಗ್ರಾಮ, ೨ ಚಕ್ರಾಂಕಿತ, ೧ ವಿಷ್ಣು ಪಾದ, ೧ ಸುದರ್ಶನ, ಗೋಪಾಲ ಕೃಷ್ಣದೇವರು
ಚರಾಸ್ತಿ- ಪಾಪ ಪುಣ್ಯ
ಸಮೀ- ಯಾರಿಂದಲಾದರೂ ತೊಂದರೆ ಅನುಭವಿಸಿದ್ದೀರಾ...
ನಾನು - ಹೌದು ದೇವರ ಪೂಜೆ ಕುಳಿತಾಗ ಆಗಮಿಸಿದ ಜಾತಿ ಗಣತಿದಾರರು, ಮಡಿ ನೀರು ಬಿಡದ ಪುರಸಭೆಯವರು, ಸಾತ್ವಿಕ ಬ್ರಾಹ್ಮಣರನ್ನು ನಿಂದಿಸುವವರು, ದೇಶವಿರೋಧೀ ನಾಸ್ತಿಕರು ಇವರಿಂದ ತೊಂದರೆ ಆಗಿದೆ.
ಸಮೀ- ತಮ್ಮ ಆಹಾರ ಪದ್ಧತಿ
ನಾನು- ಲಕ್ಷ್ಮೀ ನಾರಾಯಣ ದೇವರ ನೈವೇದ್ಯ ಮಾಡಿದ ಸಸ್ಯಾಹಾರ
ಸಮೀ- ನಿಮ್ಮ ಕುಟುಂಬ
ನಾನು - ವಸುದೈವ ಕುಟುಂಬಕಂ
ಸಮೀ- ತಮ್ಮ ಜಾತಿ
ನಾನು - ಬ್ರಾಹ್ಮಣ
ಸಮೀ- ಹಾಗಾದರೆ ತಾವು ಜಾತಿ ಪ್ರಮಾಣ ಪತ್ರ ಪಡೆದಿದ್ದೀರಾ?
ನಾನು - ನಾವು ಹಾಗೆ ಹೇಳಿಲ್ಲ, ಭಗವಂತನೇ ನಮಗೆ ಪ್ರಮಾಣ ಪತ್ರ ಕೊಟ್ಟು ಕಳಿಸಿದ್ದಾನೆ. ಕೆಲವು ಜನ ಮಾತ್ರ ಇದ್ದಲ್ಲಿಯೇ ಇದ್ದು ಹಿಂದುಳಿದಿದ್ದೇವೆ ಎಂದು ಹೇಳುತ್ತಾರೆ.
ಸಮೀ- ಸರ್ಕಾರದಿಂದ ಸೌಲಭ್ಯ ಸಿಕ್ಕಿದೆಯೇ
ನಾನು - ಯಜ್ಞ ಯಾಗ ಹೋಮ ಹವನ ಪರಮಾತ್ಮ ಮಾಡಿಸುತ್ತಾನೆ. ಗಾಳಿ ಬೆಳಕು ನೀರು ಭೂಮಿ ಎಲ್ಲವನ್ನೂ ಭಗವಂತ ನೀಡಿದ್ದಾನೆ. ಇವುಗಳನ್ನು ಸರ್ಕಾರದಿಂದ ತಡೆಹಿಡಿಯಲು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ನಮ್ಮಿಂದ ಸೌಲಭ್ಯವಾಗಿದೆ.
.
ಕಡೆಗೆ
.
ನಾನು- ಇನ್ನೂ ಏನಾದರೂ ಕೇಳುವುದಿದೆಯೇ?
ಸಮೀಕ್ಷೆದಾರರು- ಸ್ವಾಮಿ ಸಾಷ್ಟಾಂಗ ಪ್ರಣಾಮಗಳು. ಹೊರ ಹೋಗುವ ದಾರಿ ಯಾವ ಕಡೆ ಇದೆ
- ಸ.ರಾ.ಪಾ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ