ದುಬೈ: ಅಂತರರಾಷ್ಟ್ರೀಯ ಜಾನಪದ ಉತ್ಸವ ಅನಾವರಣ

Upayuktha
0

  • ಮೊದಲ ಬಾರಿಗೆ ಯುಎಇನಲ್ಲಿ ಜಾನಪದ ಕಲೋತ್ಸವ
  • ಯುಎಇ ಜಾನಪದ ಘಟಕ ದುಬೈ ಉದ್ಘಾಟನೆ
  • ಜಾನಪದ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ




ದುಬೈ: ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಮೊದಲ ಬಾರಿಗೆ ಯುಎಇ ರಾಷ್ಟ್ರದ ದುಬೈಯಲ್ಲಿ ಅತ್ಯಂತ ಸಂಭ್ರಮದ ಅಂತರರಾಷ್ಟ್ರೀಯ  ಜಾನಪದ ಕಲೇೂತ್ಸವ ಸೆಪ್ಟೆಂಬರ್‌ 7ರಂದು ದುಬೈಯ ಪ್ರತಿಷ್ಠಿತ ಜಿಮ್ಮ ಮಾಡರ್ನ್‌ ಶೈಕ್ಷಣಿಕ ಸಂಸ್ಥೆಯ ಆವರಣದಲ್ಲಿ ಸಂಪನ್ನಗೊಂಡಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಇದರ ನೂತನ ಘಟಕವಾಗಿ ಯುಎಇ ದುಬೈ ಜಾನಪದ ಘಟಕ ಉದ್ಘಾಟನೆಗೊಂಡು ಇದರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.


ಅಂತರರಾಷ್ಟ್ರೀಯ ಜಾನಪದ ಕಲೇೂತ್ಸವದ ಉದ್ಘಾಟನೆಯನ್ನು ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷ ರಾಜ್ಯೇೂತ್ಸವ ಪುರಸ್ಕೃತ ಸವೇೂ೯ತ್ತಮ ಶೆಟ್ಟಿ ಉದ್ಘಾಟಿಸಿ "ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಜಾನಪದ ಪರಿಷತ್ತು ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಕನ್ನಡ ನೆಲದ ಜಾನಪದ ಕಲೆ ಆಚಾರ ವಿಚಾರಗಳನ್ನು ಹೊರನಾಡಾದ ಯುಎಇ ನಾಡಿನಲ್ಲೂ ಪಸರಿಸುವ ನಿಟ್ಟಿನಲ್ಲಿ ಇನ್ನಷ್ಟು ಜವಾಬ್ದಾರಿಯುತ ಕೆಲಸ ಮಾಡುವಂತಾಗಲಿ. ಇದಕ್ಕೆ ನಮ್ಮೆಲ್ಲ ಕನ್ನಡಿಗರ ಪ್ರೇೂತ್ಸಾಹ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.


ನೂತನವಾಗಿ ಆಯ್ಕೆಗೊಂಡ ಜಾನಪದ ಘಟಕ ಘಟಕ ದುಬೈ ಇದರ ಪದಾಧಿಕಾರಿಗಳಿಗೆ ಕನಾ೯ಟಕ ಜಾನಪದ ಪರಿಷತ್ತು ಇದರ ಅಧ್ಯಕ್ಷ ಪ್ರೊ.ಎಚ್.ಸಿ. ಬೇೂರಲಿಂಗಯ್ಯ ಪ್ರತಿಜ್ಞಾ ವಿಧಿ ಬೇೂಧಿಸಿ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು. ನೂತನ ಘಟಕದ ಅಧ್ಯಕ್ಷ ಸಾಧನ್ ದಾಸ ಬೈಂದುಾರು ಪ್ರಾಸ್ತಾವಿಕವಾಗಿಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಆರತಿ ಅಡಿಗ ಅತಿಥಿಗಳ ಪರಿಚಯ ನೀಡಿದರು.


ಮಧ್ಯಾಹ್ನ ನಡೆದ ಡಾ.ಎಚ್ ಎಲ್. ನಾಗೇಗೌಡ ಅಂತರರಾಷ್ಟ್ರೀಯ ಜಾನಪದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಗಳಾಗಿ ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಿ "ಜಾನಪದ ಕಲೆಗೆ ತನ್ನದೇಯಾದ ಒಂದು ಸ್ವಂತಿಕೆಯಿದೆ. ಜನರ ನುಡಿ ಮಾತಿನ ಮಾಧ್ಯಮ ಮೂಲಕ ಬೆಳದು ಬಂದ ಅದ್ಬುತ ಕಲೆ ಎಂದರೆ ಜಾನಪದ ಕಲೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸಿ ವಿಸ್ತರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರಶಸ್ತಿ ಪುರಸ್ಕೃತರ ಸಾಧನೆ ಶ್ಲಾಘಿಸಿ ಅಭಿನಂದಿಸಿದರು.


ಸಭಾಧ್ಯಕ್ಷತೆಯನ್ನು ಸ್ಥಳೀಯ ಜಾನಪದ ಪರಿಷತ್ತಿನ ಘಟಕ ಅಧ್ಯಕ್ಷ ಸಾಧನ್ ದಾಸ್ ವಹಿಸಿದ್ದರು.


ಜಾನಪದ ಪರಿಷತ್ತು ಕೊಡ ಮಾಡಿದ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಕೊಡಗು; ಮಹಾದೇವ್ ಸ್ವಾಮಿ ಮೈಸೂರು ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಿದರು. ವಿವಿಧ ರಂಗದಲ್ಲಿ ವಿಶೇಷ ಸಾಧನೆಗೈದ ಶಿಕ್ಷಣ  ತಜ್ಞ  ಪ್ರೊ.ಕೆ.ಇ. ರಾಧಾಕೃಷ್ಣ ರವರನ್ನು ಸಂಮಾನಿಸಿ ಗೌರವಿಸಲಾಯಿತು. ಸಭಾವೇದಿಕೆಯಲ್ಲಿ ಅತಿಥಿ ಗಣ್ಯರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅಬುಧಾಬಿ; ರಾಜ್ಯೇೂತ್ಸವ ಪ್ರಶಸ್ತಿ ಪುರಸ್ಕೃತ ದುಬೈ ಹೊಟೇಲು ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ; ದುಬೈ ಉದ್ಯಮಿ ಗೇೂವಿಂದ ಬಾಬು ಪೂಜಾರಿ ಮುಂತಾದ ಪ್ರಧಾನ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕರ್ನಾಟಕ ವಿವಿಧ ವಲಯಗಳಿಂದ ಆಗಮಿಸಿದ ಜಾನಪದ ಪದ ಕಲಾ ತಂಡದಿಂದ ವೈವಿಧ್ಯಪೂರ್ಣ ಕಲಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಅಂತರರಾಷ್ಟ್ರೀಯ ಜಾನಪದ ಉತ್ಸವದ ನಿರ್ದೇಶಕ ಬಾಸುಮ ಕೊಡಗು ನೆರವೇರಿಸಿದರು. ಸಾಂಸ್ಕೃತಿಕ ಉತ್ಸವದ ನಿರೂಪಣೆಯನ್ನು ವಿಘ್ನೇಶ್ವರ ಕುಂದಾಪುರ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top