ದಸರಾ ಸಿಎಂ ಕಪ್ ರಾಜ್ಯಮಟ್ಟದ ಸ್ಪರ್ಧೆ: ಮಂಗಳೂರಿನ ಹರ್ಷಲ್‌ಗೆ ಬೆಳ್ಳಿ ಪದಕ

Chandrashekhara Kulamarva
0


ಮಂಗಳೂರು: ಮೈಸೂರಿನಲ್ಲಿ ಬುಧವಾರ (ಸೆ.24)ರಂದು ನಡೆದ ‘ದಸರಾ ಸಿಎಂ ಕಪ್’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ತೌಲೋ ವಿಭಾಗದಲ್ಲಿ ಮಂಗಳೂರಿನ ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಹರ್ಷಲ್ ಎನ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.


ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಹರ್ಷಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಇವರು ಪಚ್ಚನಾಡಿ ಬಂಗೇರುಸೀಮೆ ನಿವಾಸಿ ನವೀನ್ ಚಂದ್ರ ಮತ್ತು ಜಯಶ್ರೀ ದಂಪತಿಯ ಪುತ್ರನಾಗಿದ್ದು, ಮಂಗಳೂರಿನ ಇಮ್ಮೋರ್ಟಲ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್‌ನೆಸ್ ಅಕಾಡೆಮಿಯ ತರಬೇತುದಾರ ರೋಹನ್ ಎಸ್. ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top