ಬೆಳ್ಳಾರೆ: ಲಕ್ಷ್ಮಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಮಹಾಸಭೆ

Chandrashekhara Kulamarva
0


ಬೆಳ್ಳಾರೆ: ಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಗ್ರಾಮ ಪಂಚಾಯತ್ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.


ಗ್ರಾ.ಪಂ. ಬೆಳ್ಳಾರೆ ಅಧ್ಯಕ್ಷೆ ನಮಿತಾ ಎಲ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ತಾ.ಪಂ. ವಲಯ ಮೇಲ್ವಿಚಾರಕ ಮಹೇಶ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ವೇದಿಕೆಯಲ್ಲಿ ಅತಿಥಿಗಳಾಗಿ ಜಯಲಕ್ಷ್ಮೀ (BRP PRI ತಾ.ಪಂ. ಸುಳ್ಯ), ರಿತಿಕ್ (Form ಮ್ಯಾನೇಜರ್), ಮಣಿಕಂಠ (ಸದಸ್ಯರು ಗ್ರಾಮ ಪಂಚಾಯತ್ ಬೆಳ್ಳಾರೆ), ಶಶಿಕಲಾ ಚಾವಡಿ ಬಾಗಿಲು (ಲಕ್ಷ್ಮಿ ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷರು), ಮಮತಾ ಕಾರ್ಯದರ್ಶಿ (ಲಕ್ಷ್ಮಿ ಸಂಜೀವಿನಿ ಒಕ್ಕೂಟ ಬೆಳ್ಳಾರೆ), ಶ್ರೀಮತಿ  ರೇಷ್ಮಾ (ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು), ಶ್ರೀಮತಿ ವೀಣಾ ಮುಡಾಯಿತೋಟ (ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಬೆಳ್ಳಾರೆ),  ಶ್ರೀಮತಿ ಜಯಶ್ರೀ (ಸದಸ್ಯರು ಗ್ರಾಮ ಪಂಚಾಯತ್ ಬೆಳ್ಳಾರೆ) ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಸ್ವ-ಉದ್ಯೋಗಕ್ಕಾಗಿ ಒಕ್ಕೂಟದಿಂದ ಸಾಲದಿಂದ ಪಡೆದ ಸಂಘಗಳಿಗೆ ಲಾಭಾಂಶದ ಚೆಕ್ ಅನ್ನು ವಿತರಣೆ ಮಾಡಲಾಯಿತು. ವಿಶೇಷ ಚೇತನ ಸಂಘಕ್ಕೆ ಸ್ವ-ಉದ್ಯೋಗಕ್ಕೆ ಚೆಕ್ ಹಸ್ತಾಂತರಿಸ ಲಾಯಿತು. ಮಾದಕ ವ್ಯಾಪನ ಮುಕ್ತ ಅಭಿಯಾನ ಪೋಸ್ಟರ್ ಬಿಡುಗಡೆ ಮಾಡಲಾಯಿತು.


ಗೀತಾ ಲೆಕ್ಕ ಪತ್ರ ಮಂಡಿಸಿದರು. ಅಂಗನವಾಡಿ ಕಾರ್ಯಕರ್ತೆ ಇಂದಿರಾ ಪ್ರಾರ್ಥನೆ ನೆರವೇರಿಸಿದರು. ಕೃಷಿ ಸಖಿ ತಾರಾ ಸ್ವಾಗತಿಸಿದರು. ಗೀತಾ ಪ್ರೇಮ್ ವಂದಿಸಿದರು. ದಿವ್ಯಾ ನಿರೂಪಿಸಿದರು.


2025-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಮತಾ ಪಡ್ಪು, ಉಪಾಧ್ಯಕ್ಷರಾಗಿ ಲಲಿತಾ ಪಡ್ಪು, ಕಾರ್ಯದರ್ಶಿಯಾಗಿ ಅನಿಸಾ, ಖಜಾಂಚಿಯಾಗಿ ಮಿಶ್ರಿಯಾ, ಜೊತೆ ಕಾರ್ಯದರ್ಶಿಯಾಗಿ ಶೋಭನಾ ಪನ್ನೆ ಆಯ್ಕೆಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top