ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನವು ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಆಯೋಜಿಸಿದ ವಿಜ್ಞಾನ ಗಣಿತ ಮೇಳದಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರವೀಣ್ ರಾವ್ ಮತ್ತು ಸುಗಂಧಿನಿ ದಂಪತಿಗಳ ಪುತ್ರ ಪ್ರಿಯಾಂಶು ರಾವ್ (10ನೇ ತರಗತಿ), ಸುರೇಶ್ ಶೆಟ್ಟಿ ಮತ್ತು ನೈನಾ ದಂಪತಿಗಳ ಪುತ್ರ ಕನಿಷ್ಕ್ ಎಸ್. ಶೆಟ್ಟಿ (10ನೇ ತರಗತಿ) ಹಾಗೂ ಮಧುಸೂಧನ್ ಸಾಲೆ ಮತ್ತು ವಿನುತಾ ಎಮ್. ಸಾಲೆ ದಂಪತಿಗಳ ಪುತ್ರ ಅನಿತೇಜ್ ಎಮ್. ಸಾಲೆ(9ನೇ ತರಗತಿ) ಇವರ ತಂಡ ಪ್ರಥಮ ಸ್ಥಾನ ಪಡೆದಿದೆ.
ಕಿಶೋರವರ್ಗದ ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದಂಪತಿಗಳ ಪುತ್ರಿ ಮಂದಿರಾ ಕಜೆ (10ನೇ ತರಗತಿ) ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಕಿಶೋರವರ್ಗದ ಗಣಿತ ಪ್ರದರ್ಶನ ಸ್ಪರ್ಧೆಯಲ್ಲಿ ಗಿರೀಶ ಗೌಡ ಮತ್ತು ಸುಮಿತ್ರಾ ದಂಪತಿಗಳ ಪುತ್ರ ಸಾತ್ವಿಕ್ ಜಿ. (9ನೇ ತರಗತಿ) ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸಂತೋμï ಎನ್ ಮತ್ತು ಶ್ರುತಿ ಎಸ್. ದಂಪತಿಗಳ ಪುತ್ರ ಸನ್ಮಯ್ ಎನ್. (8ನೇ ತರಗತಿ) ಬಾಲ ವರ್ಗದ ವೇದಗಣಿತ ಪತ್ರವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇದಲ್ಲದೆ, ಪ್ರವೀಣ್ ಕುಮಾರ್ ಎಸ್ ಹಾಗೂ ಸೌಮ್ಯ ಶೆಟ್ಟಿ ದಂಪತಿಗಳ ಪುತ್ರಿ ವಿವಿಕ್ತಾ ಎಸ್. ರೈ (10 ನೇ ತರಗತಿ) ಗಣಿತ ಮಾದರಿ ಪ್ರದರ್ಶನದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಿವಶಂಕರ ಎಸ್ ದಾನೆಗೊಂಡರ್ ಹಾಗೂ ಕೆ. ವನಿತಾ ದಂಪತಿಗಳ ಪುತ್ರಿ ಸೌಪರ್ಣಿಕಾ (8ನೇ ತರಗತಿ) ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗಿರೀಶ ಗೌಡ ಹಾಗೂ ಸುಮಿತ್ರ ದಂಪತಿಗಳ ಪುತ್ರಿ ಸಾನ್ವಿ ಜಿ (7ನೇ ತರಗತಿ) ಗಣಿತ ಮಾದರಿ ಪ್ರದರ್ಶನದಲ್ಲಿ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


