ಸುರತ್ಕಲ್ ಮುಕ್ಕ ಮತ್ತು ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಾದ ಅಪಘಾತ ನೇೂಡಿ ಮನಸ್ಸು ತಲ್ಲಣಗೊಳಿಸುವಂತಿದೆ. ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಿರುಗಾಡುವುದೇ ಅಪಾಯಕಾರಿ ಅನ್ನುವಂತೆ ಭಯ ಹುಟ್ಟಿಸುವಂತಿದೆ. ನಮ್ಮ ಕರಾವಳಿ ತೀರದ ರಾ. ಹೆದ್ದಾರಿ ಬೈಂದೂರಿನಿಂದ ಹಿಡಿದು ಮಂಗಳೂರು ತನಕದ ಹೆದ್ದಾರಿಯ ನಿರ್ಮಾಣ ಮತ್ತು ನಿರ್ವಹಣೆ ಅತ್ಯಂತ ಅವೈಜ್ಞಾನಿಕ ಮಾತ್ರವಲ್ಲ ನಮ್ಮ ವಾಹನ ಚಾಲನೆಯ ನಿಯಮ ಕೂಡ ಅತ್ಯಂತ ಕಳಪೆ ಮಟ್ಟದಲ್ಲಿ ಇದೆ. ಇದನ್ನು ನಾವೆಲ್ಲರೂ ಒಪ್ಪಿಕೊಂಡು ತಲೆತಗ್ಗಿಸಬೇಕಾದ ಪರಿಸ್ಥಿತಿ ಬಂದಿದೆ ಎಂದರೂ ತಪ್ಪಾಗಲಾರದು.
ಈ ಹಿಂದೆ ನಮ್ಮ ರಾಷ್ಟ್ರೀಯ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರೇ ಹೇಳಿದ ಪ್ರಕಾರ ನಮ್ಮ ರಸ್ತೆಗಳ ನಿವ೯ಹಣೆ ಸಮರ್ಪಕವಾಗಿಲ್ಲ ಅನ್ನುವುದು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ನಮ್ಮ ರಸ್ತೆಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಗಳನ್ನು ನಿರ್ಮಿಸುವುದು ಎಷ್ಟು ಮುಖ್ಯವೊ ಸಮಯಕ್ಕೆ ಸರಿಯಾಗಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಅಷ್ಟೇ ಮುಖ್ಯ. ಅದು ಸರಿಯಾಗಿ ನಡೆಯುತ್ತಿಲ್ಲ. ಕರಾವಳಿ ಪ್ರದೇಶದಲ್ಲಿ ಮಳೆ ಜಾಸ್ತಿ ಇರುವ ಕಾರಣ ನಮ್ಮ ಎಲ್ಲಾ ರಸ್ತೆಗಳು ಬೇಗನೇ ಹಾಳಾಗುವ ಪರಿಸ್ಥಿತಿ ಇದೆ. ಮಾತ್ರವಲ್ಲ ಹೆದ್ದಾರಿ ಬದಿಗಳಲ್ಲಿ ನೀರು ಹರಿದು ಹೇೂಗಲು ಸರಿಯಾದ ಚರಂಡಿ ವ್ಯವಸ್ಥೆ ಕೂಡ ಇಲ್ಲ. ರಸ್ತೆಯಲ್ಲಿ ನಿಂತಿರುವ ನೀರು ಹೇಗಿದೆ ಅಂದರೆ ಕೆಲವರಿಗೆ ಅದೇ ನೀರಿನಲ್ಲಿ ವಾಹನ ಓಡಿಸುವುದೇ ಮಜಾ. ಮತ್ತೆ ಇದೇ ನೀರು ರಸ್ತೆಗಳಲ್ಲಿ ಇಂಗಿಹೇೂಗುವ ಕಾರಣ ರಸ್ತೆಯ ಗುಣಮಟ್ಟದ ಸಾಮರ್ಥ್ಯ ಬೇಗನೆ ಕುಸಿದುಹೇೂಗುತ್ತದೆ.
ಸುರತ್ಕಲ್‌ನಲ್ಲಿ ನಡೆದ ರಸ್ತೆಯ ಅಪಘಾತದ ದೃಶ್ಯ ನೇೂಡಿದಾಗ ಮೈ ಜುಂ.. ಅನ್ನಿಸಬೇಕು. ಇಲ್ಲಿನ ಅಪಘಾತದ ದೃಶ್ಯ ಗಮನಿದಾಗ ಈ ಅಪಘಾತಕ್ಕೆ ಮುಖ್ಯ ಕಾರಣ ಏನು ಯಾರು ಅನ್ನುವುದನ್ನು ಹುಡುಕಬೇಕಾದ ಅನಿವಾರ್ಯತೆ ಇದೆ. ದ್ವಿಚಕ್ರ ವಾಹನವನ್ನು ಚಲಿಸಿಕೊಂಡು ಬಂದ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿಯನ್ನು ಕ್ರಾಸ್ ಮಾಡುವಾಗ ಸ್ವಲ್ಪ ಜಾಗೃತಿ ಕಡಿಮೆ ವಹಿಸಿದ್ದಾರೆ ಅನ್ನುವುದನ್ನು ನಾವು ಮೇಲ್ನೋಟಕ್ಕೆ ಗಮನಿಸಬಹುದು. ಅಲ್ಲಿನ ಪರಿಸ್ಥಿತಿ ಹೇಗಿತ್ತೊ ಗೊತ್ತಿಲ್ಲ. ಮಳೆ ಬರುತ್ತಿದ್ದು ಹೆಲ್ಮೆಟ್ ಹಾಕಿಕೊಂಡಾಗ ರಸ್ತೆಯ ಇಕ್ಕಡೆ ದೃಷ್ಟಿ ಹರಿಸುವುದು ಸ್ವಲ್ಪ ಕಷ್ಟವಾಗಿರಲೂ ಬಹುದು. ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಲಿಸಿಕೊಂಡು ಬಂದ ವ್ಯಕ್ತಿ ಕೂಡ ಅತೀ ವೇಗದಲ್ಲಿ ಬರುತ್ತಿದ್ದ ದೃಶ್ಯ ಕಾಣುತ್ತದೆ. ಇಲ್ಲಿ ಬಹುಮುಖ್ಯವಾಗಿ ನಾವು ಗಮನಿಸ ಬೇಕಾಗಿದ್ದು ಅಲ್ಲಿನ ರಸ್ತೆಯ ಅಡ್ಡಲಾಗಿ ಹಾಕಿದ ಜೀಬ್ರಾ ಗುರುತಿನ ಮಾರ್ಕ್ ಕೂಡ ಇದೆ. ಅಂದರೆ ಇಲ್ಲಿಯೇ ರಸ್ತೆ ದಾಟ ಬೇಕೆಂಬ ನಿಯಮ ಸರಿ. ಆದರೆ ಯಾರು ಯಾವಾಗ ದಾಟಬೇಕು ದಾಟಬಾರದು ಎಂದು ನಿಯಂತ್ರಣ ಮಾಡುವ ಸಿಗ್ನಲ್ ಲೈಟ್ ಇಲ್ಲ. ಟ್ರಾಫಿಕ್ ಪೊಲೀಸರೂ ಇಲ್ಲ. ಕನಿಷ್ಠ ಪಕ್ಷ ವೇಗ ನಿಯಂತ್ರಿಸುವ ಒಂದು ಬ್ಯಾರಿಕೇಡ್ ಹತ್ತಿರದಲ್ಲಿ ಕೂಡಾ ಇಲ್ಲ. ಸುಮ್ಮನೆ ಕಾಟಾಚಾರಕ್ಕೊಂದು ಬಿಳಿ ಬಣ್ಣದ ಜೀಬ್ರಾ ಕ್ರಾಸ್ ಹಾಕಿ ಬಿಟ್ಟರೆ ಮುಗಿಯಿತಾ?
ಬೇರೆ ಸಣ್ಣಪುಟ್ಟ ದೇಶಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಎಷ್ಟು ಚೆನ್ನಾಗಿ ಪಾಲಿಸುತ್ತಾರೆ ಅನ್ನುವುದನ್ನು ಅವರಿಂದಲೇ ನೇೂಡಿ ತಿಳಿಯಬೇಕು. ರಸ್ತೆಯನಿಯಮ ವಾಹನ ಚಾಲನೆಯ ಕಾನೂನು ಎಷ್ಟು ಕಠಿಣವಾಗಿದೆ ಅಂದರೆ ಯಾವುದೆ ಒಬ್ಬ ಚಾಲಕ ರಾಂಗ್ ಸೈಡ್‌ನಲ್ಲಿ ವಾಹನ ಚಲಿಸಿದರೆ ಆತನಿಗೆ ಗರಿಷ್ಠ ಪ್ರಮಾಣದ ಫೈನ್. ತಪ್ಪಿದರೆ ಒಂದು ವಾರ ಆತನ ವಾಹನ ಬಂಧಿಸಿಡುತ್ತಾರೆ. ಆದರೆ ನಮ್ಮಲ್ಲಿ ರಸ್ತೆ ನಿಯಮ ಪಾಲಿಸದವನೇ ಹೀರೊ !
ಇತ್ತೀಚೆಗೆ ನಮ್ಮ ಬೆಂಗಳೂರಿನ ಪೊಲೀಸ್ ಇಲಾಖೆಯ ಪ್ರಕಟಣೆ ನೇೂಡಿ ಪರಮಾಶ್ಚರ್ಯವಾಯಿತು. ರಸ್ತೆಯಲ್ಲಿ ಸುರಕ್ಷತೆಯ ನಿಯಮ ಪಾಲಿಸದ ವಾಹನ ಚಾಲಕರಿಗೆ ಹಾಕುತ್ತಿದ್ದ ದಂಡದಲ್ಲಿ ರಿಯಾಯಿತಿ ಮಾಡಿದ್ದೇವೆ. ಇದರ ಪ್ರಯೇೂಜನ ಗ್ರಾಹಕರು ಪಡೆದುಕೊಳ್ಳಬಹುದು! ಇದರ ಅಥ೯ವೇನು ದಂಡ ಜಾಸ್ತಿಯಾದ ಕಾರಣ ಹಣ ಹೆಚ್ಚು ಸಂಗ್ರಹವಾಗುತ್ತಿಲ್ಲ. ಹಾಗಾಗಿ ದಂಡ ಕಡಿಮೆ ಮಾಡಿ ಅಪಘಾತ ಹೆಚ್ಚು ನಡೆದು ತನ್ಮೂಲಕ ಹೆಚ್ಚು ಸರ್ಕಾರದ ಬೊಕ್ಕಸ ತುಂಬಿಸುವ ಯೇೂಜನೆಯೋ ಹೇಗೆ?
ವಾಹನ ಅಪಘಾತದಲ್ಲಿ ಮನುಷ್ಯನ ಜೀವ ಹೇೂದರೂ ಪರವಾಗಿಲ್ಲ, ಸರ್ಕಾರಕ್ಕೆ ಒಂದಿಷ್ಟು ಹಣ ಸಂಗ್ರಹವಾದರೆ ಸಾಕು ಅನ್ನುವ ಮನುಷ್ಯ ಜೀವಿ ವಿರೇೂಧಿಗಳ ತೀರ್ಮಾನವಿರಬೇಕು? ದಂಡ ಹೆಚ್ಚಿಸಿ ವಾಹನ ಚಾಲಕರನ್ನು ಎಚ್ಚರಿಸುವ ಕೆಲಸ ಮಾಡಬೇಕಾದವರು. ಅಪಘಾತಗಳು ಹೆಚ್ಚು ಮಾಡುವ ಕೆಲಸಕ್ಕೆ ಟ್ರಾಫಿಕ್ ಪೊಲೀಸ್ ಇಲಾಖೆ ಇಳಿದಂತಿದೆ..!? ಹಾಗಾದರೆ ನಮ್ಮ ಹೆದ್ದಾರಿಗಳಲ್ಲಿ ಆಗುವ ಮಾರಣ ಹೇೂಮಗಳಿಗೆ ಯಾರು ಕಾರಣ ಅನ್ನುವುದು ನೀವೇ ಹೇಳಿ?
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ