ಉಜಿರೆ: ವಿದ್ಯಾರ್ಥಿಗಳು ಮೊದಲು ತಮ್ಮ ಮಾರ್ಗವನ್ನು ತಿಳಿಯಬೇಕು. ತಮಗೆ ಇಷ್ಟವಾದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಆಗ ನಾವು ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಮೃತ್ ಹಾಗೂ ಪರೀಕ್ಷಿತ್ ಗೋಖಲೆ ಹೇಳಿದರು.
ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ವಿತೀಯ ವಿಜ್ಞಾನದ ತರಗತಿಯಲ್ಲಿ ಅಮೃತ್ ಅವರು ಮೂಲ ವಿಜ್ಞಾನದ ವಿವಿಧ ಅವಕಾಶಗಳ ಬಗ್ಗೆ ಮಾತನಾಡಿದರು. ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪ್ರಧಾನ ಸಂಯೋಜಕಿ ಅಂಜನಾ ಸ್ವಾಗತಿಸಿ, ಸಂಸ್ಕೃತ ಸಂಘದ ಉಪಾಧ್ಯಕ್ಷ ಯಶಸ್ವಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಸನ್ನಾ ನಿರೂಪಿಸಿದರು.
ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾ ತರಗತಿಯಲ್ಲಿ ಪರೀಕ್ಷಿತ್ ಗೋಖಲೆ ಅವರು ವಾಣಿಜ್ಯಶಾಸ್ತ್ರದ ವಿವಿಧ ಅವಕಾಶಗಳ ಬಗ್ಗೆ ಮಾತನಾಡಿದರು.
ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಹ ಸಂಯೋಜಕಿ ಶ್ರೀಪೂರ್ಣಾ ನಿರೂಪಿಸಿದರು. ಧರೆಶ್ ಸ್ವಾಗತಿಸಿ, ಸಿರಿ ಜಿ. ಗೌಡ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕ ಸುಭಾಶ್ ರಾವ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ