ಮಂಗಳೂರು: ಎಡನೀರು ಮಠದಲ್ಲಿ ಸೆ.5ರಂದು ಸಂಜೆ 6ರಿಂದ 10ರ ವರೆಗೆ ಯಕ್ಷಮಿತ್ರರು ಬೆಂಗಳೂರು (ರಿ) ವತಿಯಿಂದ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಐದನೇ ಚಾತುರ್ಮಾಸ್ಯದ ಅವಧಿಯಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ|ವಸಂತ ಕುಮಾರ್ ಪೆರ್ಲ ಪಾಲ್ಗೊಳ್ಳುವರು. ಬಳಿಕ ಹಿರಿಯ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ‘ಮಹಾಪತನ’ ಕನ್ನಡ ತಾಳಮದ್ದಳೆ ನಡೆಯಲಿದೆ ಎಂದು ಯಕ್ಷಮಿತ್ರರು ಬೆಂಗಳೂರು (ರಿ) ಪ್ರಕಟನೆ ತಿಳಿಸಿದೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ