ತ್ಯಾಗರ್ತಿ: ರಾಧಾ-ಕೃಷ್ಣ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು

Upayuktha
0


ತ್ಯಾಗರ್ತಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶನಿವಾರ ಇಲ್ಲಿನ ಗಂಗಾಮತ ಸಭಾಭವನದಲ್ಲಿ ಕಾಗೋಡು ತಿಮ್ಮಪ್ಪ ವೃತ್ತದ ಯುವಜನ ಬಳಗದ ವತಿಯಿಂದ ಒಂದರಿಂದ ಆರು ವರ್ಷಗಳ ಒಳಗಿನ ಮಕ್ಕಳಿಗೆ ರಾಧಾ ಕೃಷ್ಣ ವೇಷದ ಪ್ರದರ್ಶನ ಏರ್ಪಡಿಸಲಾಗಿತ್ತು.


ತಾಯಂದಿರು ಮಕ್ಕಳಿಗೆ ವಿವಿಧ ರೀತಿಯ ರಾದೆ ಹಾಗೂ ಕೃಷ್ಣನ ವೇಷ ತೊಡಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 84 ಮಕ್ಕಳು ರಾಧಾ ಕೃಷ್ಣ ವೇಷ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.



ಉಡುಪಿ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೊಳಿಯಪ್ಪ ಹುತ್ತಾದಿಂಬ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 


ಉಪನ್ಯಾಸಕ ವಸಂತ್ ಹೊನ್ನಾಳಿ, ಪಿಎಸಿಎಸ್ ಅಧ್ಯಕ್ಷ ಟಿ.ಕೆ ಹನುಮಂತಪ್ಪ, ಪ್ರಮುಖರಾದ ಅಮೃತ್ ರಾಜ್, ಇಸಾಕ್, ನಾಗರಾಜ್, ಗುತ್ಯಪ್ಪ ಶಿಕ್ಷಕರಾದ ಸರ್ವೇಶ್, ಕಾಂತಿ, ದಿಲೀಪ್ ಇನ್ನಿತರರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top