ಕುಳಾಯಿ: ಫಿಶರೀಶ್ ಚಿತ್ರಾಪುರ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Upayuktha
0


ಕುಳಾಯಿ, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಲಯನ್ಸ್ ಕ್ಲಬ್ ನವ ಮಂಗಳೂರು, ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್, ಮಂಗಳೂರು ತಮಿಳ್ ಸಂಗಮ್, ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಹಯೋಗದಲ್ಲಿ ನಡೆಯಿತು. ನವ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಿಂಗರಾಜು ಧ್ವಜಾರೋಹಣಗೈದರು.


ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್‌ನ ಅಧ್ಯಕ್ಷ ಸುಭೋದ್ ದಾಸ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಐಕ್ಯಮತದಿಂದ ರಾಷ್ಟ್ರದ ಸರ್ವತೋಮುಖ ವಿಕಾಸಕ್ಕೆ ಶ್ರಮಿಸಬೇಕು ಎಂದರು.


ನಿವೃತ್ತ ಶಿಕ್ಷಕಿ ಪುಷ್ಪಾವತಿ, ಲಯನ್ಸ್ ಜಿಲ್ಲಾ ಪದಾಧಿಕಾರಿ ಮನೋಜ್ ಕುಮಾರ್, ಮುರಳೀಧರನ್ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಅವರು ಸೇವಾ ಸಂಸ್ಯೆಗಳ ಸಹಕಾರದಿಂದ ಶಾಲೆ ಅಭಿವೃದ್ಧಿ ಹೊಂದುತ್ತಿ ದೆ ಎಂದರು.

 

ಪುಷ್ಪಾವತಿ ಶ್ರೀನಿವಾಸ್ ರಾವ್ ಸಾಹಿತ್ಯ ಕೃತಿಗಳನ್ನು ಕೊಡುಗೆ ನೀಡಿದರು. ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಬನಿಯನ್‌ಗಳನ್ನು ನೀಡಿದರು. ನವ ಮಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಶೈಕ್ಷಣಿಕ ಚಿತ್ರ ಪಟಗಳನ್ನು ನೀಡಲಾಯಿತು.


ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ, ಜೊತೆ ಕಾರ್ಯದರ್ಶಿ ಕುಮಾರ್ ಬಂಗೇರ, ಸದಸ್ಯ ತೇಜಪಾಲ್ ಪುತ್ರನ್, ಲಯನ್ಸ್ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ, ಅಬೂಬಕರ್ ಕುಕ್ಕಾಡಿ, ಶಾಲಾ ಶಿಕ್ಷಕಿ ಸಿಂಥಿಯ, ರೂಪ, ನೀತಾ ತಂತ್ರಿ, ರೋಟರಿ ಕ್ಲಬ್ ಪಧಾದಿಕಾರಿಗಳು, ಉಪಸ್ಥಿತರಿದ್ದರು.  ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಸುಕೇಶಿನಿ ವಂದಿಸಿದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top