ಸಮಯದ ಮಹತ್ವ; ಅರಿತು ಬಳಸೋಣ

Upayuktha
0


ಮಯ ಎಂದರೆ ಕಾಲ. ನಮ್ಮ ಜೀವನದಲ್ಲಿ ಸಮಯದ ಪಾತ್ರ ಮುಖ್ಯವಾಗಿರುತ್ತದೆ. ಒಬ್ಬ ವ್ಯಕ್ತಿ ಜೊತೆ ಯಾರೆ ಇಲ್ಲದಿದ್ದರೂ ಸಮಯ ಯಾವಾಗಲೂ ಇದ್ದೇ ಇರುತ್ತದೆ. ಹಿರಿಯರ ಪ್ರಕಾರ ವ್ಯರ್ಥವಾಗಿ ಕಳೆಯುವುದೆಂದರೆ ನಮ್ಮನ್ನು ನಾವು ಮೋಸಮಾಡಿದ ಹಾಗೆ. ನಮ್ಮ ಹಿರಿಯರು ಯಾವಾಗಲೂ ಸುಮ್ಮನೆ ಕಾಲ ಕಳೆಯಬೇಡಿ ಎಂದು ಹೇಳುತ್ತಾ ಇರುತ್ತಾರೆ. ಅವರಿಗೆ ಕಾಲದ ಮಹತ್ವವು ತಿಳಿದಿರುತ್ತದೆ. ಸುಮ್ಮನೆ ಕೂತು ಕಾಲ ಕಳೆಯುವ  ಬದಲು ನಮ್ಮಿಂದ ಸಾಧ್ಯವಾಗುವ ಯಾವುದಾದರೂ ಕೆಲಸವನ್ನು ಮಾಡುತ್ತಿರಬೇಕು. ನಾವು ನಿಂತರೂ ಸಮಯವು ನಿಲ್ಲುವುದಿಲ್ಲ ಎಂದು ಸಮಯದ ಬಗ್ಗೆ ಗುರು ಹಿರಿಯರು ಹೇಳುತ್ತಿರುತ್ತಾರೆ.


ಒಬ್ಬ ವ್ಯಕ್ತಿ ತನ್ನ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡುತ್ತಿದ್ದನು. ಆದರೆ ಒಂದು ದಿನ ಅವನು ಆ ದಿನದ ಕೆಲಸವನ್ನು ನಾಳೆ ಮಾಡುವ ಎಂದು ಪ್ರತಿ ಕೆಲಸವನ್ನು ಮುಂದೂಡುತ್ತ ಇದ್ದನು. ಆದರೆ ಒಂದು ದಿನ ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳದೆ ಇದ್ದ ಕಾರಣ ಅವನು ಬಹಳ ನಷ್ಟ ಅನುಭವಿಸಿದನು. ಆಗ ಅವನಿಗೆ ಅರಿವಾಯಿತು. ನಾವು ಮಾಡುವ ಕೆಲಸ ಸಮಯಕ್ಕೆ ಸರಿಯಾಗಿ ಮಾಡಿದರೆ ಮುಂದೊಂದು ದಿನ ನಮಗೆ ಸರಿಯಾದ ಫಲ ದೊರೆಯುತ್ತದೆ. ಅವನಿಗೆ ಆದ ನಷ್ಟದಿಂದ ಅವನು ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಲು ಆರಂಬಿಸಿದನು.


ಈಗಿನ ಮಕ್ಕಳು ಸಮಯವನ್ನು ವ್ಯರ್ಥಮಾಡುವುದು ಹೆಚ್ಚಾಗಿದೆ. ಏಕೆಂದರೆ ಮೊಬೈಲ್ ಬಳಕೆ ಹೆಚ್ಚಾಗಿದೆ, ಯಾವುದೇ ಕೆಲಸ ಮಾಡದೆ ಸುಮ್ಮನೆಯಾದರೂ ಕಾಲ ಕಳೆಯುತಿರುತ್ತಾರೆ. ಮಕ್ಕಳು ಓದುವ ಬರೆಯುವ ಕಡೆ ಆಸಕ್ತಿ ತೋರದೆ ಇತರೆ ವಿಷಯಗಳಿಗೆ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ. ಹೀಗೆ ದಿನಗಳು ಕಳೆದಾಗ ವಿದ್ಯಾರ್ಥಿಗಳಿಗೆ ತಮ್ಮ ಶಾಲಾ ಕೆಲಸವನ್ನು ಆ ದಿನವೇ ಮಾಡದೆ, ನಾಳೆ ಮಾಡುವ ಎಂಬ ಮನಸ್ಥಿತಿ ಬರಬಹುದು. ಪೋಷಕರು ಮಕ್ಕಳಿಗೆ ಸಮಯದ ಮಹತ್ವವನ್ನು ತಿಳಿಸಿ ಅವರನ್ನು ಸರಿ ದಾರಿಗೆ ಕರೆದುಕೊಂಡು ಹೋಗಬೇಕಾಗಿದೆ.


ಮಕ್ಕಳಿಗೆ ಸಮಯದ ಸದುಪಯೋಗ ಪಡಿಸಿಕೊಳ್ಳಲು ಹಲವಾರು ಅವಕಾಶಗಳು ತೆರೆದಿದೆ. ತಮ್ಮ ಉಳಿದ ಸಮಯವನ್ನು ಹೇಗೆ ಉಪಯೋಗಿಸಬೇಕೆಂದರೆ ಪೋಷಕರಿಗೆ ಮನೆಕೆಲಸದಲ್ಲಿ ತಮ್ಮಿಂದಾಗುವ ಸಹಾಯಮಾಡುವುದು ಮೈದಾನದಲ್ಲಿ ಆಡುವುದರಿಂದ ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ. ಹಾಗೆಯೇ ನೃತ್ಯ, ಸಂಗೀತ, ಡ್ರಾಯಿಂಗ್, ಭಾರತನಾಟ್ಯ, ಇತ್ಯಾದಿ ತರಬೇತಿಗಳಿಗೆ ಹೋಗುವುದರಿಂದ ಸಮಯದ ಲಾಭವನ್ನು ಪಡೆದುಕೊಳ್ಳಬಹುದು. ಇದರಿಂದ ಅವರಿಗೆ ಶಿಕ್ಷಣದ ಜೊತೆಗೆ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಯದ ಲಾಭವನ್ನು ಪಡೆದುಕೊಳ್ಳಬಹುದು.


ನಾವೆಲ್ಲರೂ ಸುಮ್ಮನೆ ಕಾಲವನ್ನು ವ್ಯರ್ಥಮಾಡುವುದರಿಂದ ನಮ್ಮ ಜೀವನದಲ್ಲಿ ಒಂದಲ್ಲ ಒಂದು ದಿನ ಸಮಯಕ್ಕೆ ಪರದಾಡುವ ಪರಿಸ್ಥಿತಿ ಎದುರಾಗಬಹುದು. ಸಮಯವನ್ನು ನಾವೆಲ್ಲರೂ ಗೌರವಿಸೋಣ. ಸಮಯಕ್ಕೆ ತಕ್ಕ ಹಾಗೆ ನಾವು ನಡೆದುಕೊಂಡು ಕಾಲಕಾಲಕ್ಕೆ ಕೆಲಸವನ್ನು ಮಾಡೋಣ. 




- ಸುಮಂತ್ ವಿನೋಬನಗರ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top