ಬೆಂಗಳೂರು: ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಸಂಬಂಧಿಸಿದಂತೆ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರ್ ಗಳ ಪರಿಸ್ಥಿತಿಯೇನು? ತಿದ್ದುಪಡಿಯಿಂದ ಅವರು ಅತಂತ್ರರಾಗುವರೇ? ಈ ಬಗ್ಗೆ ಸರ್ಕಾರ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಯಾರಿಗೂ ಅನ್ಯಾಯವಾಗದಂತೆ ಸ್ಪಷ್ಟವಾಗಿ ಕಾನೂನು ರೂಪಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದರು.
2017 ರ ಅಧಿಸೂಚನೆಯಂತೆ ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್ ಪಡೆದವರು ಸೂಪರ್ ವೈಸರ್ ಗಳಾಗಿದ್ದರು. ಈಗಿನ ತಿದ್ದುಪಡಿಯ ನಂತರವೂ ಅವರು ಸೂಪರ್ ವೈಸರ್ ಗಳಾಗಿಯೇ ಮುಂದುವರೆಯುತ್ತಾರೆಯೇ? ಅವರಿಗೆ ಈಗ 100 ಚದರ ಮೀ. ವರೆಗಿನ ಕಟ್ಟಡಗಳಿಗೆ ಮಾತ್ರ ಮೇಲ್ವಿಚಾರಣೆ ಮಾಡಲು ಅವಕಾಶವಿದೆ. ಆದರೆ ಗುಜರಾತ್, ತಮಿಳುನಾಡು, ಮತ್ತು ಮಹಾರಾಷ್ಟ್ರದಲ್ಲಿ ಅನುಭವದ ಆಧಾರದ ಮೇಲೆ ಹೆಚ್ಚಿನ ವ್ಯಾಪ್ತಿಗೆ ಅವಕಾಶ ನೀಡಲಾಗುತ್ತಿದೆ. 2025 ರ ತಿದ್ದುಪಡಿಯಲ್ಲಿ ಆ ಎಲ್ಲಾ ಸ್ಥಿತಿಗತಿಗಳು ಏನಾಗಲಿವೆ? ಎಂದು ಪ್ರಶ್ನಿಸಿದರು.
ಈ ಹಿಂದೆ ಅನುಭವಿ ಡಿಪ್ಲೋಮಾ ಇಂಜಿನಿಯರ್ಸ್ ಗಳಿಗೆ ಎತ್ತರದ ಕಟ್ಟಡಗಳ ಮೇಲ್ವಿಚಾರಣೆಗೂ ಅವಕಾಶವಿತ್ತು. ಈಗ 30 ವರ್ಷ ಅನುಭವ ಇದ್ದವರಿಗೂ ಇಂತಿಷ್ಟೇ ಎಂದು ಸೀಮಿತಗೊಳಿಸಿದರೆ ಹೇಗೆ? ಹೀಗಾದರೆ ಮಂಗಳೂರಿನಲ್ಲಿರುವ ಸಾವಿರಕ್ಕೂ ಮಿಕ್ಕಿ ಇಂಜಿನಿಯರ್ ಗಳು ಹಾಗೂ ಅವರ ಉದ್ಯೋಗಿಗಳು ಸಂಕಷ್ಟಕ್ಕೀಡಾಗುತ್ತಾರೆ. ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಬಿ.ಇ ಇಂಜಿನಿಯರ್ ಗಳ ಕೊರತೆಯಾದಾಗೆಲ್ಲಾ, ಡಿಪ್ಲೋಮಾ ಇಂಜಿನಿಯರ್ಸ್ ಗಳು ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದು ಅವರನ್ನು ಕಡೆಗಣಿಸಬೇಡಿ. ಇದರಿಂದ ಮುಂದೆ ಆ ಕೋರ್ಸ್ ಗೆ ಬೇಡಿಕೆಯೇ ಇಲ್ಲದೇ ಕಾಲೇಜುಗಳು ಮುಚ್ಚುವ ಪರಿಸ್ಥಿತಿ ಬರಬಹುದು ಎಂದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವರು, ತಿದ್ದುಪಡಿಯ ನಂತರವೂ ಡಿಪ್ಲೋಮ ಇಂಜಿನಿಯರ್ಸ್ ಗಳನ್ನು ಪರಿಗಣಿಸುತ್ತೇವೆ. ಆದರೆ ಸದ್ಯಕ್ಕೆ ಅದಕ್ಕೊಂದು ಸ್ಪಷ್ಟ ನಿಯಮ ರೂಪಿಸಲಾಗಿಲ್ಲ, ಮುಂದಕ್ಕೆ ನೋಡುತ್ತೇವೆ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

