ವೀರ ರಾಣಿ ಅಬ್ಬಕ್ಕಳ ಧೈರ್ಯ, ಸಾಹಸ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಬೇಕು: ಪ್ರಕಾಶ್ ಮಲ್ಪೆ

Upayuktha
0


ಉಡುಪಿ: ವೀರ ರಾಣಿ ಅಬ್ಬಕ್ಕಳ ಧೈರ್ಯ, ಸಾಹಸ, ಯುದ್ಧ ಕೌಶಲಗಳು, ರಾಷ್ಟ್ರಪ್ರೇಮ, ನಿಸ್ವಾರ್ಥ ಸೇವೆ ನಮ್ಮ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಮತ್ತು ಇಂದಿನ ವಿದ್ಯಾರ್ಥಿನಿಯರು ನಿಂತ ನೀರಾಗದೆ ಸಾಧನೆ ಮಾಡಿದ ಸ್ತ್ರೀಯರನ್ನು ಮಾದರಿಯಾಗಿಟ್ಟುಕೊಂಡು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಸಂವೇದನಾ ಫೌಂಡೇಶನ್ ಇದರ ಸಂಸ್ಥಾಪಕ ಪ್ರಕಾಶ್ ಮಲ್ಪೆ ಅವರು ನುಡಿದರು.


ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಇದರ ಮಂಗಳೂರು ವಿಭಾಗ ಉಡುಪಿಯ ಡಾ. ಜಿ ಶಂಕರ್ ಸರಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜಿನಲ್ಲಿ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಸರಣಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಸಂಘದ ರಾಜ್ಯ ಮಟ್ಟದ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ ಅವರು ಮಾತನಾಡಿ, ವೀರರಾಣಿ ಅಬ್ಬಕ್ಕಳ ಹೋರಾಟದ ಕತೆಯನ್ನು ಚರಿತ್ರೆಯ  ಪುಟಗಳಲ್ಲಿ ಕೆಲವೇ ಸಾಲುಗಳಷ್ಟು ಓದಿದ್ದೀರಿ ಅವುಗಳನ್ನು ವಿವರವಾಗಿ ಯುವ ಜನಾಂಗಕ್ಕೆ ತಲುಪಿಸಿ, ಅವರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವ  ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಾಡುತ್ತಿದೆ. ಅಬ್ಬಕ್ಕಳ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸೋಜನ್ ಕೆ ಜಿ ಅವರು ವಹಿಸಿದ್ದರು.


ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಟಿ ಶಂಭು ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲೇಖಕಿ, ಕವಯಿತ್ರಿ ಶ್ರೀಮತಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಐಕ್ಯೂಎಸಿ ಸಂಚಾಲಕರು ಹಾಗೂ ಕಾರ್ಯಕ್ರಮದ ಸಂಯೋಜಕರು ಆಗಿರುವ ಡಾ. ಶ್ರೀಮತಿ ಅಡಿಗ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನು ಸ್ವಾಗತಿಸಿದರು. ಪ್ರತಿಭಾ ಮತ್ತು ತಂಡ ಪ್ರಾರ್ಥಿಸಿದರು ಗ್ರಂಥ ಪಾಲಕರಾದ ವೆಂಕಟೇಶ್ ಇವರು ಧನ್ಯವಾದ ಸಮರ್ಪಿಸಿದರು ತೃತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಪೂರ್ವಿಕ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top