ರಾಣಿ ಅಬ್ಬಕ್ಕ 500ನೇ ಜನ್ಮದಿನಾಚರಣೆ- ವಿಶೇಷ ಉಪನ್ಯಾಸ ಸರಣಿ

Upayuktha
0

 



ಉಡುಪಿ: ಜನನಿ ಮತ್ತು ಜನ್ಮಭೂಮಿಯನ್ನು ಸ್ವರ್ಗವೆಂದು ಪರಿಗಣಿಸಿ ಜನ್ಮಭೂಮಿಗಾಗಿ ಯುದ್ಧ ಕೌಶಲಗಳನ್ನು ಅಳವಡಿಸಿಕೊಂಡು ದೇಶಕ್ಕಾಗಿ ಹೋರಾಡಿದ ವೀರ ರಾಣಿ ಅಬ್ಬಕ್ಕಳ ತ್ಯಾಗ ಸಾಹಸಗಾಥೆ ನಿಮಗೂ ಸ್ಫೂರ್ತಿಯಾಗಿ ಅದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ, ಯಕ್ಷಗಾನ ಕಲಾವಿದ ಪ್ರೊ. ಬಿ.ಎಲ್ ಸಾಮಗ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 


ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಇದರ ಮಂಗಳೂರು ವಿಭಾಗದವರು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಸರಣಿಯ 23 ನೇ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

 

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಡಾ. ಮಾಲತಿ ಪೈ ಅವರು ವೀರರಾಣಿ ಅಬ್ಬಕ್ಕನ ಜೀವನ ಚರಿತ್ರೆಯನ್ನು ಮನಮುಟ್ಟುವಂತೆ ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಿ, ಅವಳ ತ್ಯಾಗ, ಶೌರ್ಯ, ಆಸಕ್ತಿ, ಇಚ್ಛಾ ಶಕ್ತಿ, ಧೈರ್ಯ ಕೌಶಲಗಳ ಕುರಿತು ಕುರಿತು ಉದಾಹರಣೆ ಸಮೇತ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಿ ಅವರಿಗೆ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವoತೆ ಕರೆ ನೀಡಿದರು.


ಸಂಘದ ಉಡುಪಿ ವಿಭಾಗದ ಸದಸ್ಯರೂ ಕಾರ್ಯಕ್ರಮದ ಸಂಯೋಜಕರು ಆದ ಡಾ. ಶ್ರೀಮತಿ ಅಡಿಗ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೀಲಾಬಾಯಿ ಭಟ್ ಅವರು ವಹಿಸಿದ್ದರು.

 

ಹಿಂದಿ ಭಾಷಾ ಉಪನ್ಯಾಸಕ ಡಾ. ಅನಂತ್ ರಾಮ್ ನಾಯಕ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ  ಪರಮೇಶ್ವರ. ಎಂ.ಮೊಗವೀರ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಕಾರ್ಯಕ್ರಮ ವನ್ನು ಸಂಯೋಜಿಸಿ, ನಿರೂಪಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top