ಕುತ್ತಾರ್ ಪದವು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗವು ಅಬ್ಬಕ್ಕ 100 ಪ್ರೇರಣಾದಾಯಿ ಉಪನ್ಯಾಸ ಸರಣಿಯ 25ನೇ ಕಾರ್ಯಕ್ರಮ ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ಪದವು ಇಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ರಾಣಿ ಅಬ್ಬಕ್ಕ ಕಥಾ ಸಂಕೀರ್ತನೆ ನಡೆಯುವ ಮೂಲಕ 25ನೇ ಕಾರ್ಯಕ್ರಮವನ್ನು ವಿಭಿನ್ನ ಪರಿಕಲ್ಪನೆಯಲ್ಲಿ ಆಚರಿಸಲಾಯಿತು.
ಬಾಲ ಸಂರಕ್ಷಣಾ ಕೇಂದ್ರ ಪದವು ಇದರ ಸಂಸ್ಥಾಪಕರಾದ ಡಾ. ಅನಂತಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷಾತ್ರ ಪರಂಪರೆಯನ್ನು ಹೊಂದಿರುವ ದೇಶ ಭಾರತ. ಇಲ್ಲಿನ ರಾಜ ಮಹಾರಾಜರು ನಮ್ಮ ದೇಶದ ಉಳಿವಿಗಾಗಿ ಅಪ್ರತಿಮ ಹೋರಾಟವನ್ನು ನಡೆಸಿದ್ದಾರೆ.ಅದರಲ್ಲಿ ನಮ್ಮ ಮಣ್ಣಿನ ಮಗಳು ಅಬ್ಬಕ್ಕನ ಸಾಹಸಗಾಥೆ ಎಂದೆಂದಿಗೂ ಮಾದರಿ. ಪೊರ್ಚುಗೀಸರ ವಿರುದ್ಧ ಹೋರಾಟ ಮಾಡಿದ ಅಬ್ಬಕ್ಕಳ ಚರಿತ್ರೆ ಇತಿಹಾಸ ಸೇರಿರಬಹುದು. ಆದರೆ ಅದನ್ನು ನಮ್ಮ ಮುಂದಿನ ಜನಾಂಗಕ್ಕೆ ತಲುಪಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಉಪನ್ಯಾಸ ಸರಣಿಗಳ ಮೂಲಕ ಮಾಡುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಗಾಯತ್ರಿ ಅನಂತ ಕೃಷ್ಣ ಭಟ್, ವಿಭಾಗದ ಅಧ್ಯಕ್ಷರಾದ ವಾಣಿ ಯು ಎಸ್ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಇದರ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ ಕೆ, ಸ್ವಾಗತಿಸಿದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

