ಮಂಗಳೂರು: ರಾಮಕೃಷ್ಣ ಮಿಷನ್ ಮಂಗಳೂರು ಇವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸ್ವಚ್ಛ ಮಂಗಳೂರು ಪ್ರತಿಷ್ಠಾನವು ಯುವಕರಿಗಾಗಿ 3ರಿಂದ 6 ತಿಂಗಳ ಅವಧಿಯ ಇಂಟರ್ನ್‌ಶಿಪ್‌ಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಮತ್ತು ಸ್ವಚ್ಛ, ಹಸಿರು ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕಾಗಿ ಯುವ ಸಮುದಾಯ ತಮ್ಮ ಕೊಡುಗೆಗಳನ್ನು ನೀಡಲು ಇದೊಂದು ಸುವರ್ಣಾವಕಾಶವಾಗಿದೆ.
ಇಂಟರ್ನ್‌ಶಿಪ್‌ನಲ್ಲಿ ಏನೇನು ಕಲಿಸಲಾಗುತ್ತದೆ? ವಿವರ ಇಲ್ಲಿದೆ ನೋಡಿ:
ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ಕಾರ್ಯಕ್ರಮಗಳನ್ನು ಆಯೋಜಿಸುವುದು, ತಂಡದ ಸಮನ್ವಯ, ಸಮುದಾಯ ಸಂಪರ್ಕ ಮತ್ತು ಜಾಗೃತಿ ಕಾರ್ಯಕ್ರಮಗಳು, ಚಟುವಟಿಕೆಗಳ ದಾಖಲೀಕರಣ ಮತ್ತು ವರದಿ ಮಾಡುವಿಕೆಯ ಕೌಶಲ್ಯಗಳನ್ನು ಈ ಅವಧಿಯಲ್ಲಿ ಕಲಿಸಲಾಗುತ್ತದೆ.
ಸಮರ್ಥವಾಗಿ ಇಂಟರ್ನ್‌ಶಿಪ್ ಅವಧಿಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ
* ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರ,
* ಉದ್ಯೋಗ ಉಲ್ಲೇಖಗಳು ಮತ್ತು ಉದ್ಯೋಗ ಬೆಂಬಲ
* ಆಹಾರ ಮತ್ತು ವಸತಿ
* ಮಾಸಿಕ ಸ್ಟೈಫಂಡ್ ಗಳನ್ನು ನೀಡಲಾಗುವುದು ಎಂದು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸುವವರಿಗೆ ಇರಬೇಕಾದ ಅರ್ಹತೆಗಳು:
1. ಪುರುಷ ಅಭ್ಯರ್ಥಿಗಳು
2. ಹೊಸಬರು ಮತ್ತು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ಆದ್ಯತೆ
3. ಚಾಲನಾ ಕೌಶಲ್ಯವಿದ್ದಲ್ಲಿ ಹೆಚ್ಚುವರಿ ಪ್ರಯೋಜನವಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


