ಕುದ್ರೋಳಿ ಗಣೇಶ್ ಶಿಕ್ಷಣಕ್ಕಾಗಿ ಜಾದೂ ಕೈಚಳಕಕ್ಕೆ ವಿದ್ಯಾರ್ಥಿಗಳು ಫುಲ್ ಖುಷ್!

Upayuktha
0



ಕಲಬುರಗಿ: ಶಿಕ್ಷಣಕ್ಕಾಗಿ ಜಾದೂ ಕುದ್ರೋಳಿ ಗಣೇಶ್ ಅವರ ವಿಶೇಷ ಜಾದೂ ಪ್ರದರ್ಶನದಲ್ಲಿ ವಿಧಾನಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್ ಮಂತ್ರದಂಡ ಬಳಸಿ ಖಾಲಿ ಪೆಟ್ಟಿಗೆಯಲ್ಲಿ ಸನ್ಮಾನದ ಹಾರ ಪ್ರತ್ಯಕ್ಷಗೊಳಿಸಿ ಸೇರಿದ ವಿದ್ಯಾರ್ಥಿಗಳನ್ನು ಜಾದೂ ಮೂಲಕ ಮೋಡಿ ಮಾಡಿ ಆಶ್ಚರ್ಯ ಚಕಿತಗೊಳಿಸಿದರು.


ಕಲಬುರಗಿಯ ಚಂದ್ರಕಾಂತ್ ಪಾಟೀಲ್ ಪಿಯು ಕಾಲೇಜಿನಲ್ಲಿ ಆಗಸ್ಟ್ 16 ರಂದು ಅಂತರಾಷ್ಟ್ರೀಯ ಖ್ಯಾತಿಯ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರು ನೀಡಿದ "ಶಿಕ್ಷಣಕ್ಕಾಗಿ ಜಾದೂ" ಪ್ರದರ್ಶನದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಅವರನ್ನು ವೇದಿಕೆ ಅಹ್ವಾನಿಸಿ ಅವರ ಕೈಯಲ್ಲಿ ಮಂತ್ರದಂಡ ನೀಡಿ ಖಾಲಿ ಪೆಟ್ಟಿಗೆಯ ಮೇಲೆ ಆಬ್ರಕಡಬ್ರ ಮಂತ್ರ ಜಪಿಸಿದಾಗ ಪೆಟ್ಟಿಗೆಯೊಳಗೆ ಸನ್ಮಾನದ ಹಾರ ಪ್ರತ್ಯಕ್ಷ ಗೊಂಡಾಗ ಸ್ವತಃ ವಿಧಾನಪರಿಷತ್ ಸದಸ್ಯ ಬಿ ಜಿ ಪಾಟೀಲ್ ವಿಸ್ಮಯಗೊಂಡರು. ವಿದ್ಯಾರ್ಥಿಗಳು ಚಪ್ಪಾಳೆಯ ಸುರಿಮಳೆಗೈದರು.


ಶಿಕ್ಷಣಕ್ಕೆ ಪೂರಕವಾಗುವಂತೆ ಜಾದೂ ಕಲೆಯನ್ನು ಬಳಸುವ ವಿಶಿಷ್ಟ ಪ್ರಯೋಗದ ಪ್ರದರ್ಶನವನ್ನು ಸುಮಾರು 2 ಗಂಟೆಗಳಷ್ಟು ಕಾಲ ನೀಡಿ ಮೆದುಳು ಚುರುಕುತನ, ಸ್ಮರಣ ಶಕ್ತಿ ಹೆಚ್ಚಳ ಹಾಗೂ ಕ್ರಿಯಾಶೀಲರಾಗಿ ಸೃಜನಾತ್ಮಕವಾಗಿ ವ್ಯಕ್ತಿತ್ವ ಕಟ್ಟಿಕೊಳ್ಳುವ ಅನೇಕ ಜಾದೂ ಮಕ್ಕಳನ್ನು ರಂಜಿಸಿತು. ಮನರಂಜನೆಯ ಜೊತೆ ಜೊತೆಗೆ ವಿದ್ಯಾರ್ಥಿಗಳನ್ನು ಲವಲವಿಕೆಯಿಂದ ಇಡುವ ಸ್ಮರಣ ಶಕ್ತಿಯನ್ನು ಜಾಗೃತಗೊಳಿಸುವ ಜಾದೂ ತಂತ್ರವನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ ಮೂಲಕ ಪ್ರಯೋಗ ಮಾಡಿ ನೆನಪಿನ ಶಕ್ತಿ ಹೆಚ್ಚಳ ಮಾಡುವ ವಿಧಾನವನ್ನು ತಿಳಿಸಿದರು.


ಜಾಗೃತ ಮನಸ್ಸು ಹಾಗೂ ಸುಪ್ತ ಮನಸ್ಸು ವ್ಯಕ್ತಿಯ ಮೇಲೆ ಬೀರುವ ಪ್ರಭಾವ ಹಾಗೂ ದೀರ್ಘಕಾಲದ ನೆನಪು ಮತ್ತು ಅದರ ಪ್ರಯೋಜನ ಜಾದೂನಲ್ಲಿ ವ್ಯಕ್ತಗೊಂಡಿತ್ತು. ಪರಿಸರ ಸಂರಕ್ಷಣೆ, ಸ್ವಚ್ಛತಾ ಅಭಿಯಾನ, ಭಾವೈಕ್ಯತೆ, ಭಾಷಾ ಸಾಮರಸ್ಯ, ಕಾಗದದಿಂದ ನೋಟುಗಳ ಪ್ರತ್ಯಕ್ಷ, ಖಾಲಿ ಪೆಟ್ಟಿಗೆಯಿಂದ ರಾಷ್ಟ್ರಧ್ವಜ ಅರಳಿಸುವುದು ಹೀಗೆ ಶೈಕ್ಷಣಿಕ ಮನೋಭಾವ ಹಾಗೂ ಜಾಗೃತಿ ಮೂಡಿಸುವ ಜಾದೂ ಪ್ರದರ್ಶನ ವಿದ್ಯಾರ್ಥಿಗಳನ್ನು ರಂಜಿಸಿತು.


ಚಂದ್ರಕಾಂತ್ ಪಾಟೀಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕುನಾಲ್ ಸೇಠ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಶಂಕರ್ ರಾವ್, ಮಾನವ ಸಂಪನ್ಮೂಲ ಅಧಿಕಾರಿ ಡಾ. ವಾಣಿ ತೊನಸನಹಳ್ಳಿ, ಉಪನ್ಯಾಸಕರಾದ ಹನುಮಂತ, ರೇಷ್ಮಾ ಹಾಗೂ ವಿದ್ಯಾರ್ಥಿಗಳು ಜಾದೂನಲ್ಲಿ ಪಾಲ್ಗೊಂಡರು. ಚಂದ್ರಕಾಂತ್ ಪಾಟೀಲ್ ಶಾಲೆಯ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಜಾದು ಕಾರ್ಯಕ್ರಮ ನೋಡಿ ಖುಷಿಪಟ್ಟರು. ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಬಿ ಎಸ್ ದೇಸಾಯಿ ಹಾಗೂ ಆಕಾಶವಾಣಿಯ ಡಾ. ಸದಾನಂದ ಪೆರ್ಲ ಉಪಸ್ಥಿತರಿದ್ದರು.


ಆಗಸ್ಟ್ 19ರಂದು ಕಲಬುರಗಿ ಯ ನೆಹರು ಗಂಜ್ ನಲ್ಲಿರುವ ಅಮಿತ್ ಪಾಟೀಲ್  ಶಾಲೆಯಲ್ಲಿ ಶಿಕ್ಷಣಕ್ಕಾಗಿ ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top