ಮಂಗಳೂರು: ಭಾರತದ ಅತ್ಯಂತ ಪ್ರತಿಷ್ಠಿತ ಸಿನಿಮಾ ಮತ್ತು ಕಥೆ ಹೇಳುವಿಕೆಗೆ ನೀಡುವ 'ಸ್ಕ್ರೀನ್ ಅವಾರ್ಡ್ಸ್ 2025' ಈ ಬಾರಿ ಯೂಟ್ಯೂಬ್ ನಲ್ಲಿ ಪ್ರಸಾರವಾಗಲಿದೆ ಎಂದು ಸಂಸ್ಥೆಯು ಘೋಷಿಸಿದೆ.
ಸಮಗ್ರತೆ ಮತ್ತು ಯೋಗ್ಯತೆಯ ಆಧಾರದಲ್ಲಿ ಈ ಪ್ರಶಸ್ತಿಯನ್ನು ಇಂಡಿಯನ್ ಎಕ್ಸ್‍ಪ್ರೆಸ್ ನೀಡುತ್ತಿದ್ದು, ಸಂಪಾದಕೀಯ ವಿಶ್ವಾಸಾರ್ಹತೆ, ಸಾಂಸ್ಕೃತಿಕ ಪರಂಪರೆ ಮತ್ತು ಡಿಜಿಟಲ್ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಪ್ರಶಸ್ತಿಯ ವಿಜೇತರನ್ನು ಸ್ವತಂತ್ರ, ಲಾಭರಹಿತ ಸಂಸ್ಥೆಯಾಗಿರುವ ಸ್ಕ್ರೀನ್ ಅಕಾಡೆಮಿ ಆಯ್ಕೆ ಮಾಡಿದ್ದು, ಪ್ರಖ್ಯಾತ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಸಾಂಸ್ಕೃತಿಕ ಧುರೀಣರು ಸೇರಿಕೊಂಡು ನಿಜವಾದ ಶ್ರೇಷ್ಠ ಪ್ರತಿಭೆಗಳನ್ನು ಗುರುತಿಸಿದ್ದಾರೆ ಎಂದು ಅನಂತ್ ಗೋಯೆಂಕಾ ಮತ್ತು ಸ್ಕ್ರೀನ್ ಅವಾರ್ಡ್ಸ್ ನ ಕ್ಯುರೇಟರ್ ಪ್ರಿಯಾಂಕಾ ಸಿನ್ಹಾ ಝಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಬಾರಿಯ ಪ್ರಶಸ್ತಿ ಪ್ರದಾನ ಯೂಟ್ಯೂಬ್‍ನಲ್ಲಿ ಪ್ರಸಾರ ಆಗಲಿದೆ. ಈ ಮೂಲಕ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಲಿದೆ. ಮೊದಲ ಬಾರಿಗೆ ಬಾಲಿವುಡ್ ನ ಅತಿದೊಡ್ಡ ತಾರೆಯರು ಯೂಟ್ಯೂಬ್ ನ ಅತ್ಯಂತ ಜನಪ್ರಿಯ ಕ್ರಿಯೇಟರ್ ಗಳ ಜೊತೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.
ಸ್ಕ್ರೀನ್ ಅವಾರ್ಡ್ಸ್ 2025 ಭಾರತದ ಪ್ರೇಕ್ಷಕರೊಂದಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಸಂಪರ್ಕ ಸಾಧಿಸಲು ಬಯಸುವ ಬ್ರಾಂಡ್ ಗಳಿಗೆ ಉತ್ತಮ ಗೋಚರತೆ ಮತ್ತು ಬಹು ರೂಪದಲ್ಲಿ ಕತೆ ಹೇಳುವ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ