ಶ್ರೀನಿವಾಸ ಫಾರ್ಮಸಿ ಕಾಲೇಜ್ ನಲ್ಲಿ ನೂತನ ವಿದ್ಯಾರ್ಥಿ ಸಮಾವೇಶ

Upayuktha
0


ಮಂಗಳೂರು: ನೂತನ ವಿದ್ಯಾರ್ಥಿ ಸಮಾವೇಶವು ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಆಗಸ್ಟ್ 20, 2025ರಂದು ಜರುಗಿತು.


ಡಾ. ಸಿಎ.ಎ.ರಾಘವೇಂದ್ರರಾವ್, ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಚಾನ್ಸೆಲರ್, ಶ್ರೀನಿವಾಸ್ ಯುನಿವರ್ಸಿಟಿ ಇವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಕಾರಾತ್ಮಕ ಮನೋಭಾವ, ಕಠಿಣ ಪರಿಶ್ರಮ ಮತ್ತು ರಚನಾತ್ಮಕ ಜ್ಞಾನ ಹೊಂದಿರಬೇಕು ಎಂದು ಕರೆಯಿತ್ತರು.


ಡಾ. ಎ.ಶ್ರೀನಿವಾಸ್ ರಾವ್, ಉಪ ಕುಲಪತಿಗಳು, ಶ್ರೀನಿವಾಸ್ ಯುನಿವರ್ಸಿಟಿ, ಉಪಾಧ್ಯಕ್ಷರು, ಎ. ಶಾಮರಾವ್ ಫೌಂಡೇಶನ್, ಮಂಗಳೂರು, ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಅವರು ಫಾರ್ಮಸಿ ವಿಭಾಗದಲ್ಲಿ ಇರುವಂತಹ ವಿವಿಧ ವೃತ್ತಿಪರ ಆಯ್ಕೆಗಳನ್ನು ತಿಳಿಸಿ ಅದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು ಹಾಗೂ ವಿದ್ಯಾರ್ಥಿಗಳಿಗೆ ಏನಾದರೂ ಮಾರ್ಗದರ್ಶನ ಬೇಕಾದಲ್ಲಿ ಕಾಲೇಜಿನ ಅಧ್ಯಾಪಕರ ಸಲಹೆ ಪಡೆದುಕೊಳ್ಳಲು ತಿಳಿಸಿದರು.


ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಆರ್ ಶಬರಾಯರು ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಏಳಿಗೆಯನ್ನು ತರುವಲ್ಲಿ ಶಿಸ್ತು ಬದ್ಧ ಕಠಿಣ ಪರಿಶ್ರಮ ಹಾಗೂ ಶ್ರದ್ದೆಯಿಂದ ಕೂಡಿದ ಕಲಿಕೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು. ಡಾ. ವೀರೇಶ್ ಕೆ.ಚೆಂಡೂರ, ಪ್ರೊಫೆಸರ್ ಇವರು ಬಿ.ಫಾರ್ಮ ಮತ್ತು ಫಾರ್ಮ ಡಿ. ಕೋರ್ಸಿನ ಬಗ್ಗೆ ಮಾಹಿತಿ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದರು ನೂತನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 


ಪದ್ಮಾವತಿ ಪಿ.ಪ್ರಭು ಮತ್ತು ಅನ್ವಿತಾ ಡಿ ಇವರು ಕಾರ್ಯಕ್ರಮ ನಿರೂಪಿಸಿದರು. ಡಾ. ಕರುಣಾಕರ ಹೆಗ್ಡೆ, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ, ಇವರು ವಂದನಾರ್ಪಣೆಗೈದರು. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top