ಜನಮನದ ಇಷ್ಟದೇವತೆ ಗಣಪತಿ; ಅವನ ಉಪಾಸನೆಗೆ ಹಲವಾರು ಮಾರ್ಗ, ಮುಗ್ಧಭಕ್ತಿಯಿಂದ ಹೈಟೆಕ್ ಇ-ಪೂಜೆಯವರೆಗೆ ನಾನಾ ವಿಧ. ತಿಳಿದಷ್ಟು ಮತ್ತೂ ತಿಳಿಯಬೇಕೆನ್ನುವ ವಿನಾಯಕೋಪಾಸನೆಯ ಬಗ್ಗೆ ಇಲ್ಲೊಂದಿಷ್ಟು ಪ್ರಶ್ನೆಗಳಿವೆ. ಉತ್ತರಿಸಲು ಪ್ರಯತ್ನಿಸಿ- ಇನ್ನೂ ಹೆಚ್ಚಿನ ವಿವರಗಳಿಗೆ ಗುರುರಾಜ ಪೋಶೆಟ್ಟಿಹಳ್ಳಿಯವರ “ವಿಶ್ವವಂದಿತ ವಿನಾಯಕ” ಕೃತಿ (ಶ್ರೀ ಸಿದ್ಧಿವಿನಾಯಕ ಪ್ರಕಾಶನದಿಂದ ಪ್ರಕಟಿತ) ಯನ್ನು ಕೊಂಡು ಓದಬಹುದು. ದೂ. 9035618076.
1) ಆದ್ಯಂತಪ್ರಭು ಈ ವಿಶಿಷ್ಟ ರೂಪದ ಗಣಪನ ಜತೆ ಸಮ್ಮಿಳಿತವಾಗಿರುವ ದೇವರು ಯಾರು?
2) ‘ಕಲ್ಪು ಕಾವ್ಯದ ಮಸಿಯ ಕುಡಿಕೆಯ ಟಿಲ್ಟು ಮಾಡುವ ಮೊದಲು…………………’ ಹೀಗೆ ಕನ್ನಡಾಂಗ್ಲ ಗಣಪನನ್ನು ಚಿತ್ರಿಸಿದವರು ಯಾರು?
3) ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿನ್ನೊಳಗಿಹರನ್ಯಾರಮ್ಮ' ಎಂಬ ಕೀರ್ತನೆ ಬರೆದ ಪ್ರಸಿದ್ಧ ಹರಿದಾಸರು ಯಾರು?
4) ‘ಮುದಾಕರಾತ್ತ ಮೋದಕಂ….’ ಈ ಗಣೇಶ ಪಂಚರತ್ನ ಕೃತಿಯನ್ನು ರಚಿಸಿದವರು ಯಾರು?
5) ಹೊಸಗನ್ನಡ ಅತ್ಯುತ್ತಮ ಗಣೇಶ ವೈಶೇಷಿಕ ಕಾವ್ಯವಾದ ಗಣೇಶ ದರ್ಶನವನ್ನು ಬರೆದವರು ಯಾರು?
6) ಎಷ್ಟು ಮುಖದ ರುದ್ರಾಕ್ಷಿ ಗಣಪತಿಯ ಪ್ರತೀಕ?
7) ಗಣಪತಿಗೆ ಪ್ರಿಯವಾದ ತಿಥಿ, ವಾರ, ಬಣ್ಣ, ಸಂಖ್ಯೆ ಹಣ್ಣು ಯಾವುದು?
8) ಸದಾ ನೀರಿನಲ್ಲಿ ಮತ್ತು ಗುಹೆಯೊಳಗೆ ಇರುವ ಗಣಪತಿ ದೇವಸ್ಥಾನ ಎಲ್ಲಿದೆ?
9) ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿಳ್ಳಾರಿ ಗೀತೆಯಾದ ‘ಲಂಬೋದರ ……ಲಕುಮಿಕರ’ ವನ್ನು ರಚಿಸಿದವರು ಯಾರು?
10) ಗಣಪತಿಗೆ ಸಂಬಂಧಿಸಿದ ನಕ್ಷತ್ರ ಯಾವುದು?
11) ಗಣಪತಿಗೆ ಯಾವ ಸಂವತ್ಸದ ಅಭಿಮಾನಿ ದೇವತೆ?
12) ಚಂದ್ರನ ಮೇಲೆ ಸಿಟ್ಟು ಬಂದು ಲಂಬೋದರ ತನ್ನ ದಾಡೆಹಲ್ಲೊಂದನ್ನೇ ತುಂಡರಿಸಿ ಚಂದ್ರನಿಗೆ ಹೊಡೆಯಲು ಹೊರಟ್ಟಿದ್ದರಿಂದ ಅವನಿಗೆ ಬಂದ ಹೆಸರು?
13) ವಟುರೂಪದಲ್ಲಿ ದನಗಾಹಿಯಂತೆ ಕೋಲು ಹಿಡಿದು ನಿಂತಿರುವ ಗಣಪ ಎಲ್ಲಿ ಕಾಣಿಸುತ್ತಾನೆ?
14) ಗಣೇಶನ ವಾಹನವಾದ ಇಲಿ ಪೂರ್ವದಲ್ಲಿ ಏನಾಗಿತ್ತು?
15) ಗಣಪತಿಯ ಹಣವನ್ನು ಸಾಲವಾಗಿ ಪಡೆದು ಅದಕ್ಕೆ ಬಡ್ಡಿಯನ್ನು ಗಣಪತಿ ಹಬ್ಬದ ಕಜ್ಜಾಯಕ್ಕಾಗಿ ನೀಡುತ್ತಿದ್ದ ಬಂದು ಕುತೂಹಲಕರ ಐತಿಹಾಸಿಕ ಘಟನೆ ಕುರಿತಾದ ಶಿÀಲಾಶಾಸನ ಎಲ್ಲಿದೆ?
16) ‘ಓ ಗಣಪನ್’ ಕ್ಷಮಿಸು ನಮ್ಮ … ಪನ್.’ ಎಂದು ಪ್ರಾರ್ಥಿಸುವ ಹನಿಗವನಕಾರ ಯಾರು?
17) ಬೆಂಗಳೂರಿನ ಒಂದು ವಾರ್ಡ್ ಗಣೇಶನ ಹೆಸರಿನಲ್ಲಿದೆ ? ಯಾವುದೀ ವಾರ್ಡ್?
18) ಶ್ರಾವಣ ಶುದ್ಧ ಚತುರ್ಥಿಯಿಂದ ಭಾದ್ರಪದ ಶುದ್ಧ ಚತುರ್ಥಿವರೆಗೆ 1 ತಿಂಗಳ ಪರ್ಯಂತ ಆಚರಿಸುವ ವ್ರತದ ಹೆಸರೇನು?
19) ಅಂಗಹೀನನಾದ ಕಾರ್ತವೀರ್ಯಾರ್ಜುನನು ಯಾರಿಂದ ಗಣಪತಿ ಮಂತ್ರೋಪದೇಶ ಪಡೆದನು?
20) ದೋಣಿಯಲ್ಲಿ ಕಜ್ಜಾಯ ನೈವೇದ್ಯ ಸ್ವೀಕರಿಸುವ ಗಣಪ ಎಲ್ಲಿದ್ದಾನೆ?
21) ಮುದ್ಗಲ ಪುರಾಣದಲ್ಲಿ ವರ್ಣಿಸಿರುವ ಗಣಪತಿಯ ರೂಪಗಳ ಸಂಖ್ಯೆ ಎಷ್ಟು?
22) ‘21’ ಪದ್ಯಗಳಿರುವ ದಾಸಸಾಹಿತ್ಯದಲ್ಲಿನ ಗಣಪತಿ ಸ್ತುತಿ ಯಾವುದು? ರಚಿಸಿದವರು ಯಾರು?
***********
ಸರಿಯುತ್ತರ
1) ಹನುಮಂತ
2) ಜಿ.ಪಿ. ರಾಜರತ್ನಂ
3) ಕನಕದಾಸರು
4) ಆದಿಶಂಕರಾಚಾರ್ಯರು
5) ಪು.ತಿ.ನ.
6) ಎಂಟುಮುಖ
7) ಚತುರ್ಥಿ, ಮಂಗಳವಾರ, ಕೆಂಪು, 21, ಬೇಲ
8) ಗುಡ್ಡೆಟ್ಟು (ಉಡುಪಿ ಜಿಲ್ಲೆ)
9) ಪುರಂದರದಾಸರು
10) ಹಸ್ತಾ
11) ಪ್ರಮೋದೂತ
12) ಬಾಲಚಂದ್ರ
13) ಗೋಕರ್ಣ
14) ‘ಕ್ರೌಂಚ’ನೆಂಬ ಗಂಧÀರ್ವ
15) ಬೇಲೂರು
16) ದುಂಢಿರಾಜ್ . ಎಚ್
17) ತ್ಯಾಗರಾಜನಗರ - ನಂ. 56
18) ವರದಗಣಪತಿ ವ್ರತ
19) ದತ್ತಾತ್ರೇಯ, ಏಕಾಕ್ಷರ
20) ಉದ್ಯಾವರ (ಉಡುಪಿ ಜಿಲ್ಲೆ)
21) 32
22) ಹರಿಕಥಾಮೃತಸಾರ, ಜಗನ್ನಾಥದಾಸರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


