ರೋಹನ್ ಕಾರ್ಪೋರೇಶನ್ ವತಿಯಿಂದ ಉದ್ಯೋಗಿಗಳು, ಕಾರ್ಮಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ

Chandrashekhara Kulamarva
0


ಮಂಗಳೂರು: ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಮಿಕರ ಉತ್ತಮ ಆರೋಗ್ಯದ ಕಡೆಗೆ ಕಾಳಜಿ ತೋರುವ ಉದ್ದೇಶದಿಂದ ರೋಹನ್ ಕಾರ್ಪೋರೇಶನ್ ಸಂಸ್ಥೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.


ಈ ಶಿಬಿರ ಮಂಗಳೂರು ಬಿಜೈ ಮುಖ್ಯ ರಸ್ತೆಯಲ್ಲಿರುವ ರೋಹನ್ ಸಿಟಿ ಆವರಣದಲ್ಲಿ ನಡೆಯಿತು. ಶಿಬಿರವನ್ನು ಹಿಂದ್ ಕುಷ್ಟ್ ನಿವಾರಣ್ ಸಂಘ (ರಿ) ಮತ್ತು ಲಯನ್ಸ್ ಕ್ಲಬ್ ಮಂಗಳಾದೇವಿ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಬೆಳಿಗ್ಗೆಯಿಂದಲೇ ಶಿಬಿರದಲ್ಲಿ ನೂರಾರು ಉದ್ಯೋಗಿಗಳು ಮತ್ತು ಕಾರ್ಮಿಕರು ಭಾಗವಹಿಸಿದ್ದರು. ತಜ್ಞ ವೈದ್ಯರ ತಂಡದಿಂದ ರಕ್ತದೊತ್ತಡ, ಡಯಾಬಿಟಿಸ್, ದಂತಚಿಕಿತ್ಸೆ, ಇ.ಸಿ.ಜಿ, ಸಾಮಾನ್ಯ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಿತು.


ರೋಹನ್ ಕಾರ್ಪೋರೇಶನ್‌ನ ಡೈರೆಕ್ಟರ್ ಡಿಯೋನ್ ಮೊಂತೇರೊರವರು “ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಕಾರ್ಮಿಕರ ಕೊಡುಗೆ ಅಮೂಲ್ಯವಾಗಿದೆ. ಅವರ ಆರೋಗ್ಯದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತಿದ್ದೇವೆ. ಈ ಶಿಬಿರವು ಕಾಳಜಿಯ ಪ್ರತಿಬಿಂಬವಾಗಿದೆ” ಎಂದು ಅಭಿಪ್ರಾಯಪಟ್ಟರು.


ಮಂಗಳೂರು ಡಿಎಪಿಸಿಯು ಜಿಲ್ಲಾ ಮೇಲ್ವಿಚಾರಕರಾದ ಮಹೇಶ್ ರವರು “ಇದೊಂದು ಸಾಮಾನ್ಯ ಆರೋಗ್ಯ ತಪಾಸಣೆಯ ಶಿಬಿರವಲ್ಲ, ಇದು ಸಂಸ್ಥೆಯ ಸಿಬ್ಬಂದಿಗಳ ಮತ್ತು ಕಾರ್ಮಿಕರ ಆರೋಗ್ಯಕ್ಕೆ ನೆರವಾಗುವಂತೆ ರೂಪಿಸಲಾದ ಸಾರ್ಥಕ ಹೆಜ್ಜೆಯಾಗಿದೆ. ಭವಿಷ್ಯದಲ್ಲಿಯೂ ಇಂತಹ ಸಾಮಾಜಿಕ ಹಾಗೂ ಆರೋಗ್ಯಪೂರ್ಣ ಯೋಜನೆಗಳನ್ನು ಮುಂದುವರಿಯಲಿ” ಎಂದು ಆಶಿಸಿದರು.


ಶಿಬಿರದಲ್ಲಿ ಉಪಸ್ಥಿತರಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಆರೋಗ್ಯ ಅಧಿಕಾರಿ ಸಲೀಂ ಪಾಶಾ, “ಇಂತಹ ಶಿಬಿರಗಳು ನಮ್ಮ ಶಾರೀರಿಕ ಆರೋಗ್ಯದ ತಪಾಸಣೆಯಷ್ಟೇ ಅಲ್ಲ, ಸಂಸ್ಥೆ ಉದ್ಯೋಗಿಗಳು ಮತ್ತು ಕಾರ್ಮಿಕರಿಗಾಗಿ ಬಗ್ಗೆ ಹೊಂದಿರುವ ನಿಜವಾದ ಕಾಳಜಿಯನ್ನೂ ತೋರಿಸುತ್ತವೆ. ರೋಹನ್ ಕಾರ್ಪೋರೇಶನ್ ಮಾಡುತ್ತಿರುವ ಈ ಪ್ರಯತ್ನ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಲಿ” ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಸುಮನಾ, ಲಯನ್ಸ್ ಕ್ಲಬ್ ಮಂಗಳಾದೇವಿ ಮಂಗಳೂರು ಅಧ್ಯಕ್ಷರಾದ ಸಂತೋಷ ಪೂಂಜ, ಎ.ಜೆ. ಡೆಂಟಲ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೇಷ್ಠ ಶೆಟ್ಟಿ, ಕೆಎಂಸಿ ಮಂಗಳೂರಿನ ಸಮುದಾಯ ವೈದ್ಯಕೀಯ ವಿಭಾಗದ ಶ್ರಿಮತಿ ಶರಾವತಿ, ಯೋಜನಾ ವ್ಯವಸ್ಥಾಪಕ ನರೇಶ್ ಕುಮಾರ್, ಹಿಂದ್ ಕುಷ್ಟ ನಿವಾರಣ ಸಂಘ ಯೋಜನಾ ವ್ಯವಸ್ಥಾಪಕರಾದ ಕಾಂತಾ ನಾಯಕ, ಹೆಲ್ತ್ ಸೇಫ್ಟಿ ಎನ್ವಿರಾನ್‌ಮೆಂಟ್ ಮ್ಯಾನೇಜರ್‌ ಆಗಿರುವ ಪುನೀತ್ ಕುಮಾರ್ ರವರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top