ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದುತ್ವನಿಷ್ಠರು ಹಾಗೂ ಧರ್ಮಪ್ರೇಮಿಗಳಿಗೆ ರಾಖಿ ಕಟ್ಟಿ ರಕ್ಷಾಬಂಧನದ ಆಚರಣೆ
ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ಕಳೆದ 23 ವರ್ಷಗಳಿಂದ ಸಮಾಜದಲ್ಲಿ ರಾಷ್ಟ್ರಧರ್ಮರಕ್ಷಣೆ , ಧರ್ಮಪ್ರಸಾರ ಹಾಗೂ ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಿದೆ. ಈ ಬಾರಿ ರಕ್ಷಾ ಬಂಧನದ ನಿಮಿತ್ತ ಹಿಂದುತ್ವಕ್ಕಾಗಿ ಕಾರ್ಯ ಮಾಡುತ್ತಿರುವ ಹಲವಾರು ಧರ್ಮಪ್ರೇಮಿಗಳಿಗೆ, ಹಿಂದುತ್ವನಿಷ್ಠರಿಗೆ ಸಮಿತಿಯ ಕಾರ್ಯಕರ್ತರು ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯವನ್ನು ತಿಳಿಸಿದರು.
ಭಾಜಪದ ಶಾಸಕರಾದ ಛಲವಾದಿ ನಾರಾಯಣ ಸ್ವಾಮಿ, ಶಾಸಕರಾದ ಸುರೇಶ್ ಕುಮಾರ್, ಯುವ ಬ್ರಿಗೇಡ್ ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ಮಾಧ್ಯಮ ಮಿತ್ರರು ಹಾಗೂ ಉದ್ಯಮಿಗಳು, ಹಿತಚಿಂತಕರು ಸೇರಿದಂತೆ ಇನ್ನು ಹಲವಾರು ಹಿಂದೂ ಬಾಂಧವರಿಗೆ ರಕ್ಷಾ ಬಂಧನದ ನಿಮಿತ್ತ ರಾಖಿ ಕಟ್ಟಿ ಶುಭಾಶಯ ತಿಳಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
