ಬಾಂಧವ್ಯ ಬೆಸೆಯುವ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಪುಟಾಣಿಗಳು

Upayuktha
0


ಮಂಗಳೂರು: ಬಾಂಧವ್ಯ ಬೆಸೆಯುವ, ಒಗ್ಗಟ್ಟನ್ನು ಸಾಂಕೇತಿಸುವ ಬಂಧುತ್ವದ ಹಬ್ಬ ರಕ್ಷಾ ಬಂಧನ ನಾಡಿನೆಲ್ಲೆ ಶನಿವಾರ ನಡೆದಿದೆ. ದೇರಳಕಟ್ಟೆಯ ಚಿಲ್ಟನ್ ಪ್ಲೇ ಸ್ಕೂಲ್‌ನಲ್ಲಿಯೂ ವಿಶೇಷ ರೀತಿಯಲ್ಲಿ ರಕ್ಷಾ ಬಂಧನದ ಆಚರಣೆ ನಡೆಯಿತು.


ಪುಟ್ಟ ಪುಟ್ಟ ಪುಟಾಣಿಗಳೇ ತುಂಬಿರುವ ಈ ಪ್ಲೇ ಸ್ಕೂಲ್‌ನಲ್ಲಿ ಶನಿವಾರ ಸಂಭ್ರಮ ಸಡಗರ ಮನೆಮಾಡಿತ್ತು. ಪುಷ್ಪಾಲಂಕೃತ ದೀವಿಗೆಯ ಸುತ್ತ ರಕ್ಷೆಯನ್ನಿಟ್ಟು ಆರತಿ ಬೆಳಗಿದ ಬಳಿಕ ತಿಲಕವಿಟ್ಟು, ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ಪುಟಾಣಿಗಳು ಸಂಭ್ರಮಿಸಿದರು. ಜೊತೆಗೆ ಒಬ್ಬರಿಗೊಬ್ಬರು ಸಿಹಿತಿಂಡಿ ಹಂಚಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದರು. ಹಿರಿಯರು ಅಕ್ಷತೆಯ ಮೂಲಕ ಹರಸಿದರು.



ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಲ್ಲಿ ಎಳವೆಯಲ್ಲಿಯೇ ಸಂಸ್ಕಾರದ ದೀವಿಗೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಸಂಸ್ಥೆಯ ಪ್ರಮುಖರಾದ ಅಮಿತಾ, ಚಂದ್ರಾವತಿ, ಮಕ್ಕಳನ್ನು ಜನತದಿಂದ ನೋಡಿಕೊಳ್ಳುವ ಸಂಧ್ಯಾ, ವಿದ್ಯಾ ಇವರುಗಳ ಮುತುವರ್ಜಿ ಇಲ್ಲಿ ಎದ್ದು ಕಾಣುತ್ತದೆ. ಪ್ರತಿಯೊಂದು ಆಚರಣೆಯನ್ನು ಇಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ಸಂಸ್ಕೃತಿಯ ಪುಟ್ಟ ಪಾಠ ಹೇಳಿಕೊಡಲಾಗುತ್ತಿರುವುದು ಮೆಚ್ಚುಗೆಗೆ ಪಾತ್ರವಾಗುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top