ಬೆಂಗಳೂರು : ರಾಜರಾಜೇಶ್ವರಿನಗರದ ಬೆಮೆಲ್ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 10, 11 ಮತ್ತು 12ರಂದು ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಭಜನಾ ಕಾರ್ಯಕ್ರಮ ಹಾಗೂ ಸಂಜೆ 6-30ಕ್ಕೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ :
ಆಗಸ್ಟ್ 10, ಭಾನುವಾರ : "ಹರಿದಾಸ ವಾಣಿ". ಗಾಯನ : ಸಂಗೀತ ವಿದುಷಿಯರಾದ ದಿವ್ಯಾ ಗಿರಿಧರ್ ಹಾಗೂ ನಂದಿನಿ ಗುಜಾರ್. ವಿದ್ವಾನ್ ಜಯರಾಮಾಚಾರ್ (ಕೀಬೋರ್ಡ್), ವಿದ್ವಾನ್ ರಾಜೇಂದ್ರ ನಾಕೋಡ್ (ತಬಲಾ), ವಿದ್ವಾನ್ ಶಿವಲಿಂಗ್ ರಾಜಪೂರ್ (ಕೊಳಲು), ವಿದ್ವಾನ್ ಪದ್ಮನಾಭ ಕಾಮತ್ (ರಿದಂಪ್ಯಾಡ್).
ಆಗಸ್ಟ್ 11, ಸೋಮವಾರ : ಡಾ|| ಜಯಂತಿ ಕುಮರೇಶ್ ಅವರಿಂದ "ವೀಣಾ ವಾದನ", ವಿದ್ವಾನ್ ಕುಮರೇಶ್ ಅವರಿಂದ ಪಿಟೀಲು ವಾದನ.
ಆಗಸ್ಟ್ 12, ಮಂಗಳವಾರ : ಬೆಳಗ್ಗೆ 9-30ಕ್ಕೆ ರಮಾ ಪ್ರಸನ್ನ ಮತ್ತು ರಾಹುಲ್ ರಾಮನ್ ರವರಿಂದ "ವೀಣಾವಾದನ". ಸಂಜೆ 6-30ಕ್ಕೆ ಕು|| ಮೇಧಾ ವಿದ್ಯಾಭೂಷಣ್ ಮತ್ತು ಸಂಗಡಿಗರಿಂದ "ದಾಸವಾಣಿ". ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







