ಉತ್ತಮ ಸ್ಥಾನಕ್ಕೆ ಏರಲು ಪ್ರಯತ್ನ ಮುಖ್ಯ - ಡಾ.ಕೆ ಸುಬ್ರಹ್ಮಣ್ಯ ಭಟ್

Upayuktha
0



ಪುತ್ತೂರು: ಸತತವಾದ ಪ್ರಯತ್ನ  ಒಬ್ಬ ವ್ಯಕ್ತಿಯ ಜೀವನದ ಯಶಸ್ವಿಗೆ ಕಾರಣವಾಗುತ್ತದೆ. ವಿದ್ಯಾರ್ಥಿ ಹಂತದಲ್ಲಿ ತಿಳಿದುಕೊಂಡಂತಹ ಎಲ್ಲಾ ವಿಚಾರಗಳನ್ನು ತಮ್ಮ ಬದುಕಿನಲ್ಲಿ ತಪ್ಪದೇ ಅಳವಡಿಸಿಕೊಳ್ಳಬೇಕು. ಔಷಧಿ ಎನ್ನುವುದು ಮಾನವನ ಸುಸ್ಥಿರ  ಜೀವನಕ್ಕೆ ಅತ್ಯಗತ್ಯವಾದದ್ದು,  ಹಾಗಾಗಿ ಔಷದಿಯ ಸಂಶೋಧನೆಗೆ ಎಂದಿಗೂ ಕೊನೆಯಿರುವುದಿಲ್ಲ.ಅದು ಎಂದೆಂದಿಗೂ ನಿರಂತರವಾದ ಪ್ರಕ್ರಿಯೆ ಎಂದು ಸಿಎನ್ಓಐಸಿ ಲೈಫ್ ಸೈನ್ಸ್ ಇದರ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಕೆ.ಸುಬ್ರಮಣ್ಯ ಭಟ್ ತಿಳಿಸಿದರು. 


ಇವರು ಪುತ್ತೂರಿನ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್ ಇದರ  ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಡಾ. ಕೆ ಪ್ರಭಾಕರ ಭಟ್ ಅವರು  ವಿದ್ಯಾರ್ಥಿಗಳು ತಮ್ಮತನವನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆಯ ಕಡೆಗೆ ಆಸಕ್ತಿ ಬೆಳೆಸುವತ್ತ ಶಿಕ್ಷಕರು ಹೆಚ್ಚು ಒತ್ತನ್ನು ನೀಡಬೇಕು ಹಾಗೂ ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ಬೆಳೆಯಬೇಕು ಎಂದು ತಿಳಿಸಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ. ಎಂ.ಪಿ ಅವರು ವಾರ್ಷಿಕ ವರದಿಯನ್ನು ಮಂಡಿಸಿ ವಿದ್ಯಾರ್ಥಿಗಳು ತಮ್ಮ ಗುರಿ,ಕನಸು ಮತ್ತು ಪ್ರಯತ್ನಡೆಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಎಂ ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಅಶೋಕ್ ಪ್ರಭು, ಕಾಲೇಜಿನ ಖಜಾಂಜಿ ಮೂಲಚಂದ್ರ, ವಿದ್ಯಾರ್ಥಿ ಸಂಘದ  ಕಾರ್ಯದರ್ಶಿ  ಪ್ರಗತಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. 


ಕಾರ್ಯಕ್ರಮವನ್ನು ಕಾಲೇಜಿನ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಗೌತಮಿ.ಬಿ ವಂದಿಸಿದರು. ಉಪನ್ಯಾಸಕಿಯರಾದ  ಪೂರ್ಣಿಮಾ ಕೆ.ಎಸ್  ಮತ್ತು ವಿದ್ಯಾ ಮುರುಗೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top