ಕಾಪು ಸರಕಾರಿ ‍ಪ್ರಥಮ ದರ್ಜೆ ಕಾಲೇಜಿನ ಯಶೋದಾ ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

Upayuktha
0



ಉಡುಪಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು, ಉಡುಪಿ ಇಲ್ಲಿ ಸೇವೆಸಲ್ಲಿಸುತ್ತಿರುವ ಅಸೋಸಿಯೇಟ್‌ ಪ್ರೊಫೆಸರ್‌ ಶ್ರೇಣಿಯ ಕಾಲೇಜು ಗ್ರಂಥಪಾಲಕರಾದ ಯಶೋದಾ ಅವರಿಗೆ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್‌ ಗೆಹ್ಲೋಟ್‌ ರಿಂದ 2025ನೇ ಸಾಲಿನ ಅತ್ಯುತ್ತಮ ಗ್ರಂಥಪಾಲಕಿ ಎಂಬ ನೆಲೆಯಲ್ಲಿ “ಅಧ್ಯಾಪಕ ಭೂಷಣಪ್ರಶಸ್ತಿ” ಪ್ರದಾನಿಸಿ ಸನ್ಮಾನಿಸಿದರು. 


ಕರ್ನಾಟಕ ರಾಜ್ಯ ಮಹಾವಿದ್ಯಾಲಯಗ ಳ ಶಿಕ್ಷಕ ಸಂಘದ ಮಂಗಳೂರು ವಿಭಾಗದ ವತಿಯಿಂದ ಜುಲ್ಯೆ 26 ರಂದು ನಡೆದ   “ ಪ್ರೇರಣಾದಿವಸ್” ಪ್ರಯುಕ್ತ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ವಿ.ಎಸ್‌ .ಆಚಾರ್ಯ ಸಭಾಂಗಣದಲ್ಲಿ ಕಾರ್ಯಕ್ರಮನಡೆಯಿತು.


ಯಶೋದಾರವರು ಕಾಲೇಜು ಗ್ರಂಥಾಲಯವನ್ನು ಕೇವಲ ಪುಸ್ತಕ ಸಂಗ್ರಹದ ಸ್ಥಾನವನ್ನಾಗಿಸದೆ ಬದಲಿಗೆ ಜ್ಞಾನ ವಿನಿಮಯದ ಕೇಂದ್ರವನ್ನಾಗಿ ರೂಪಿಸಿ ,ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿನೂತನ ಪ್ರಯೋಗಗಳಾದ ಹಿನ್ನಲೆ ಸಂಗೀತದ ವಾತಾವರಣ, ಒಳಾಂಗಣ ಹಾಗೂ ಹೊರಾಂಗಣ ಸಸ್ಯಗಳು, ಹಳೆಯ ಪ್ರಶ್ನೆಪತ್ರಿಕೆಗಳ ಕ್ಯೂ.ಆರ್‌.ಕೋಡ್‌, ವರ್ಚುವಲ್‌ ಪುಸ್ತಕ ಪ್ರದರ್ಶನ, ಅನೇಕ ರಾಜ್ಯಮಟ್ಟದ ಕಾರ್ಯಗಾರ , ಯುಟ್ಯೂಬ್‌ ಚಾನಲ್‌, ಗ್ರಂಥಾಲಯ ಸುದ್ದಿಪತ್ರಿಕೆ ಹೀಗೆಹಲವಾರು ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಸಾಕಷ್ಟು ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಕೆಲಸ ಮಾಡಿದ್ದಾರೆ. 


ಸಂಸದಕ್ಯಾ. ಬ್ರಿಜೇಶ್‌ ಚೌಟ, ಮಂಗಳೂರು ವಿ.ವಿ.ಕುಲಪತಿ ಪಿ.ಎಲ್.ಧರ್ಮ ,ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್‌ ಆಳ್ವ, ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕಸಂಘದ ಅಧ್ಯಕ್ಷರಾದ ಡಾ.ಗುರನಾಥ ಬಡಿಗೇರ, ಪ್ರಧಾನ ಕಾರ್ಯದರ್ಶಿ ಡಾ,ಮಾಧವಎಂ.ಕೆ ಮೊದಲಾದಗಣ್ಯರು ಉಪಸ್ಥಿತರಿದ್ದರು. ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಬೋಧಕರು, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top