ಮಂಗಳೂರು: ಶಿವಾ ಆಫ್ ಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಹಾಗೂ ಗುರುದೇವ ಪ್ರಕಾಶನ ವತಿಯಿಂದ ಅಗಸ್ಟ್ ಮೂರರಂದು ಮಂಗಳೂರಿನ ಕಣಚೂರು ನಾಟೆಕಲ್‌ನ ವೈದ್ಯಕೀಯ ಮುಖ್ಯ ನಿರ್ದೇಶಕ, ಸಲಹೆಗಾರ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ನಮ್ಮ ವೈದ್ಯೋ ನಾರಾಯಣ ಎಂಬ ಪ್ರಶಸ್ತಿಯನ್ನು ಬೆಳಗಾವಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡುವುದಾಗಿ ನಮ್ಮವೈದ್ಯೋ ನಾರಾಯಣ ಸಂಪಾದಕ ಸುನಿಲ್ ಪರೀಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕಾಶನದ ವೈದ್ಯರ ಕುರಿತಾದ ಕವನ ಸಂಕಲನ ಲೋಕಾರ್ಪಣೆಯ ನೆನಪಿನಲ್ಲಿ ಕವನ ಬರೆದ ಇವರನ್ನು ಆ ವೇಳೆ ಶಾಲು ಹಾರ ಸ್ಮರಣಿಕೆ ಸಹಿತ ಸನ್ಮಾನಿಸಲಿದ್ದಾರೆ.
ಡಾ ಸುರೇಶ ನೆಗಳಗುಳಿ ಅವರು ಬರವಣಿಗೆಯಲ್ಲಿ ಐವತ್ತು ವರ್ಷಗಳ ಅನುಭವಿಯಾಗಿದ್ದು ಮುಕ್ತಕ, ಗಜಲ್, ಭಾವಗೀತೆ ಸಹಿತ 14 ಸಂಕಲನಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಗೂ ಬದಲಾಗದವರು ಎಂಬ ಚಲನ ಚಿತ್ರದಲ್ಲಿ ನಟರಾಗಿಯೂ ಅಭಿನಯಿಸಿದ್ದಾರೆ. ಹಲವಾರು ಟಿ.ವಿ, ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ