ಅಕ್ಟೋಬರ್ 26: ಅರಮನೆ ನಗರಿ “ಮೈಸೂರು ಮ್ಯಾರಥಾನ್‌”ಗೆ ಸಜ್ಜು

Upayuktha
0



ಬೆಂಗಳೂರು: ಕರ್ನಾಟಕದ ಐತಿಹಾಸಿಕ ನಗರಿ ಮೈಸೂರು, ಫಿಟ್‌ನೆಸ್, ಪರಂಪರೆ ಮತ್ತು ಸಮುದಾಯ ಮನೋಭಾವದ ಅದ್ಧೂರಿ ಆಚರಣೆಯಲ್ಲಿ ಅಕ್ಟೋಬರ್ 26, 2025 ರ ಭಾನುವಾರದಂದು ಮೊದಲ ಮೈಸೂರು ಮ್ಯಾರಥಾನ್ ಅನ್ನು ಆಯೋಜಿಸಲು ಸಜ್ಜಾಗಿದೆ. ಈ ಕಾರ್ಯಕ್ರಮವನ್ನು NEB ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್, ಇಂಡಿಯಾ ಪೋಸ್ಟ್ ಮತ್ತು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿದೆ.


ಅಕ್ಟೋಬರ್ 26, 2025 ರಂದು ನಡೆಯಲಿರುವ ಮೈಸೂರು ಮ್ಯಾರಥಾನ್‌ನ ಅಧಿಕೃತ ಲೋಗೋ ಮತ್ತು ಪಿಕ್ಚರ್ ಪೋಸ್ಟ್‌ಕಾರ್ಡ್ ಅನ್ನು ಆಗಸ್ಟ್ 11, 2025 ರಂದು ಬೆಂಗಳೂರಿನ ಜಿ.ಪಿ.ಒದ ಮೇಘದೂತ್ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.


ಭಾಗವಹಿಸಲು ಇಚ್ಛಿಸುವವರು, ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಮತ್ತು 5ಕೆ ವಿಭಾಗಗಳಿಂದ ಆಯ್ಕೆ ಮಾಡಬಹುದು. ಓಟದ ಮಾರ್ಗವು ಚಾಮುಂಡಿ ಬೆಟ್ಟದ ರಮಣೀಯ ಭೂಪ್ರದೇಶಗಳ ಮೂಲಕ ಹಾದುಹೋಗುತ್ತದೆ, ಓಟಗಾರರಿಗೆ ನೈಸರ್ಗಿಕ ಸೌಂದರ್ಯ ಮತ್ತು ದೈಹಿಕ ಸಹಿಷ್ಣುತೆಯ ಅಪರೂಪದ ಮಿಶ್ರಣವನ್ನು ನೀಡುತ್ತದೆ.


ಈ ಓಟ ಮೈಸೂರಿನ ಅಂಚೆ ತರಬೇತಿ ಕೇಂದ್ರದಿಂದ ಮೊದಲುಗೊಂಡು ಸಾಗುವ ಮೂಲಕ ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸುತ್ತಿದೆ.


ಕಾರ್ಯಕ್ರಮದ ಕುರಿತು ಮಾತನಾಡಿದ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಕೆ ಪ್ರಕಾಶ್, "ಮೈಸೂರು ಮ್ಯಾರಥಾನ್‌ನ ಮೊದಲ ಆವೃತ್ತಿಯನ್ನು ಪ್ರಸ್ತುತಪಡಿಸಲು ಭಾರತೀಯ ಅಂಚೆ ಹೆಮ್ಮೆಪಡುತ್ತದೆ. ಇದು ಅಕ್ಟೋಬರ್ 9 ರಂದು ಆಚರಿಸಲಾಗುವ ವಿಶ್ವ ಅಂಚೆ ದಿನದ ಭಾಗವಾಗಿದೆ. ತನ್ನ ಶ್ರೀಮಂತ ಪರಂಪರೆಯನ್ನು ಹೊಂದಿರುವ ಅಂಚೆ ತರಬೇತಿ ಕೇಂದ್ರವು ಹೊಸ ಪೀಳಿಗೆಯನ್ನು ಆರೋಗ್ಯ ಮತ್ತು ಸಕ್ರಿಯ ಜೀವನದ ಕಡೆಗೆ ಪ್ರೇರೇಪಿಸಲು ಪರಿಪೂರ್ಣ ವೇದಿಕೆಯಾಗಿದೆ" ಎಂದರು.


ಈ ಕಾರ್ಯಕ್ರಮಕ್ಕಾಗಿ ನೋಂದಣಿಗಳು ಇದೀಗ ಪ್ರಾರಂಭವಾಗಿದ್ದು, ದೇಶದಾದ್ಯಂತ ಓಟಗಾರರು ಇಲ್ಲಿ ಸೈನ್ ಅಪ್ ಮಾಡಬಹುದು: 

https://www.mysamay.in/public/event/info/3afc8819-d56f-4f5f-bed6-27fa1b444439


ಇದೇ ಅಕ್ಟೋಬರ್‌, ಮೈಸೂರಿನ ನಗರದಲ್ಲಿ ಪರಂಪರೆ, ಪ್ರಕೃತಿ, ಬೆಟ್ಟ-ಗುಡ್ಡಗಳ ಜೊತೆಗೆ ಹರುಷ ತುಂಬಿದ ಮನಸಿನಿಂದ ನಾವು ಓಡುತ್ತಿರುವಾಗ ನಮ್ಮ ಜೊತೆಯಾಗಿ!


ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಐ.ಎ.ಎಸ್,  ಐ.ಪಿ.ಒ.ಎಸ್ ಹಾಗೂ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಪ್ರಕಾಶ್ ಕೆ,ಸಂದೇಶ್ ಮಹಾದೇವಪ್ಪ, ಐ.ಪಿ.ಒ.ಎಸ್, ನಿರ್ದೇಶಕರು (ಹೆಚ್.ಕ್ಯೂ), ಕರ್ನಾಟಕ ವೃತ್ತ; ವಿ ತಾರಾ, ನಿರ್ದೇಶಕರು, ಬೆಂಗಳೂರು ಪ್ರದೇಶ; ನಾಗರಾಜ್ ಅಡಿಗ - ಸಿ.ಎಂ.ಡಿ, N.E.B ಸ್ಪೋರ್ಟ್ಸ್; ಡಾ. ರೀತ್ ಅಬ್ರಹಾಂ- ಅರ್ಜುನ ಪ್ರಶಸ್ತಿ ಪುರಸ್ಕೃತರು, ನಿರ್ದೇಶಕರು, N.E.B ಸ್ಪೋರ್ಟ್ಸ್ ಇವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 


إرسال تعليق

0 تعليقات
إرسال تعليق (0)
To Top