ಡಾ. ಎನ್ ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜು: ಸುಸ್ಥಿರ ಅಭಿವೃದ್ದಿ ಕೋಶ ಉದ್ಘಾಟನೆ

Upayuktha
0


 

ನಿಟ್ಟೆ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ  ಕಾಲೇಜಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವನ್ನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಎಸ್ ಆರ್ ಎಲ್ ಎಂ ತರಬೇತುದಾರ  ಕೆ. ದೀಪಕ್ ಕಾಮತ್ ಕಾಂಜರಕಟ್ಟೆ ಉದ್ಘಾಟಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ  ‘ನಮ್ಮ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ನಮ್ಮ ಜವಬ್ದಾರಿ ‘ ವಿಷಯದ ಕುರಿತು ಕೆ. ದೀಪಕ್ ಕಾಮತ್ ಕಾಂಜರಕಟ್ಟೆ ಉಪನ್ಯಾಸ ನೀಡಿದರು. ಪರಿಸರದ ಕುರಿತ ಮಾನವರ ಬೇಜವಾಬ್ದಾರಿ ನಡೆಯೇ ಪರಿಸರ ವಿನಾಶಕ್ಕೆ ಕಾರಣವಾಗಿದೆ, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ, ನಮ್ಮ ನಮ್ಮನ್ನು ಶುಚಿ- ಸೌಂದರ್ಯವಾಗಿ ಇಟ್ಟುಕೊಂಡಂತೆ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು, ಇದಕ್ಕಾಗಿ  ದೊಡ್ಡ ದೊಡ್ಡ ಕೆಲಸಗಳನ್ನು ಮಾಡಬೇಕಾಗಿಲ್ಲ, ನಮ್ಮ ನಮ್ಮ ಮನೆಗಳಲ್ಲಿಯೇ ಕಸದ ನಿರ್ವಹಣೆ, ಏಕ ಬಳಕೆ ವಸ್ತುಗಳನ್ನು ಬಳಸದೇ ಇರುವುದು, ಟೆಟ್ರ ಪ್ಯಾಕೇಟ್ ಗಳನ್ನು ಬಳಸದೇ ಇರುವದು ಇಂತಹದ್ದೇ ಸಣ್ಣ ಸಣ್ಣ ಚಟುವಟಿಕೆಗಳಿಂದ ನಾವು ನಮ್ಮ ಪರಿಸರವನ್ನು ಉಳಿಸಿಕೊಳ್ಳಬಹುದು, ಜೊತೆಗೆ ಎಲ್ಲರಲ್ಲೂ ‘ನನ್ನ ತ್ಯಾಜ್ಯ ನನ್ನ ಜವಾಬ್ದಾರಿ’ ಎನ್ನುವ ಪರಿಕಲ್ಪನೆ ರೂಪುಗೊಳ್ಳಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ  ಅಭಿವೃದ್ದಿ ಎಂದರೆ ಕೇವಲ  ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು ಮಾತ್ರವಲ್ಲ, ಮುಂದಿನ ತಲೆಮಾರಿಗೆ  ಈ ಪರಿಸರ ಮತ್ತು ನಾವು ಪ್ರಕೃತಿಯಿಂದ ಪಡೆದ ಸೌಲಭ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದೂ ಅಭಿವೃದ್ದಿ ಎಂದು ತಿಳಿಸಿದರು, ಹಾಗೂ  ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವೂ ಈ ಕುರಿತು ಯುವ ಜನತೆಗೆ ಅರಿವು ಮೂಡಿಸಬೇಕು ಎಂದು ಕರೆನೀಡಿದರು.


ಕಾರ್ಯಕ್ರಮದಲ್ಲಿ, ಐಕ್ಯೂಎಸಿ ಸಂಯೋಜಕರಾದ  ಪ್ರಕಾಶ್ ಉಪಸ್ಥಿತರಿದ್ದರು, ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶದ ಸಂಯೋಜಕಿ ಸೌಮ್ಯ ಎಂ.ಜೆ ಅತಿಥಿಗಳನ್ನು ಸ್ವಾಗತಿಸಿದರು, ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶದ  ಕಾರ್ಯದರ್ಶಿ ಕುಮಾರಿ ಶ್ರೀನಿಧಿ ಮೆಂಡನ್ ವಂದಿಸಿದರು, ಕುಮಾರಿ ಲೀಶಾ ಕಾರ್ಯಕ್ರಮವನ್ನು ನಿರೂಪಿಸಿದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top