ಸಮಾನತೆ ಉತ್ತೇಜನಕ್ಕೆ ಹೊಸ ಉಪಕ್ರಮ

Upayuktha
0



ಮಂಗಳೂರು: ದಂಪತಿಗಳಲ್ಲಿ ಸಮಾನತೆಯ ಭಾವನೆಯನ್ನು ಮೂಡಿಸಲು ತಮ್ಮ ಮನೆಗಳ ನಾಮಫಲಕಗಳಲ್ಲಿ ಪತಿ ಹಾಗೂ ಪತ್ನಿ ಹೀಗೆ ಇಬ್ಬರ ಹೆಸರನ್ನೂ ಪ್ರದರ್ಶಿಸುವ ಉಪಕ್ರಮವನ್ನು ಸನ್‍ಫೀಸ್ಟ್ ಮಾರಿ ಲೈಟ್ ಮತ್ತು ನಟಿ ಜ್ಯೋತಿಕಾ ದಂಪತಿಗಳು ಉತ್ತೇಜಿಸುತ್ತಿದ್ದಾರೆ.


ತಮಿಳುನಾಡಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕುಟುಂಬಗಳ ದಂಪತಿ ತಮ್ಮ ಇಬ್ಬರ ಹೆಸರನ್ನೂ ನಾಮಫಲಕದಲ್ಲಿ ಪ್ರದರ್ಶಿಸುವ ಪ್ರತಿಜ್ಞೆ ಕೈಗೊಂಡು ಯಶಸ್ವಿಯಾದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಈ ಅಭಿಯಾನವನ್ನು ವಿಸ್ತರಿಸಲಾಗುತ್ತಿದೆ ಎಂದು ಐಟಿಸಿ ಫುಡ್ಸ್ ಬಿಸ್ಕತ್ ಮತ್ತು ಕೇಕ್ ವ್ಯವಹಾರಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಹ್ಯಾರೀಸ್ ಶೇರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಸನ್‍ಫೀಸ್ಟ್ ನಡೆಸಿದ ಸಮೀಕ್ಷೆ ಪ್ರಕಾರ ಕರ್ನಾಟಕದ ಮೂರನೇ ಎರಡರಷ್ಟು ಮನೆಗಳ ಫಲಕಗಳಲ್ಲಿ ದಂಪತಿಗಳ ಪೈಕಿ ಒಬ್ಬರ ಹೆಸರು ಮಾತ್ರ ಇದೆ. ದಂಪತಿಗಳಲ್ಲಿ ಪರಸ್ಪರ ಹಂಚಿಕೆಯ ಕೊಡುಗೆಯನ್ನು ಗುರುತಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. 1900-315-7837ಕ್ಕೆ ಕರೆ ಮಾಡಿ ಇಬ್ಬರ ಹೆಸರನ್ನೂ ಪ್ರದರ್ಶಿಸುವ ಪ್ರತಿಜ್ಞೆ ಕೈಗೊಳ್ಳುವಂತೆ ಸಲಹೆ ಮಾಡಿದ್ದಾರೆ. ಆಸಕ್ತರಿಗೆ ಕಸ್ಟಮೈಸ್ ಮಾಡಿದ ನೇಮ್‍ಪ್ಲೇಟ್ ವಿನ್ಯಾಸಕ್ಕೆ ಕೂಡಾ ಸನ್‍ಫೀಸ್ಟ್ ನೆರವು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top