ಬಳ್ಳಾರಿ: ಭಾರತದ ಪ್ರಮುಖ ಟೈರ್ ತಯಾರಕ ಕಂಪನಿಯಾದ ಸಿಯೆಟ್ ಇಂದು ಗಣಿಗಾರಿಕೆ ಪ್ರದೇಶಗಳಂತಹ ಕಠಿಣ ಭೂಪ್ರದೇಶಗಳಲ್ಲಿ ಬಳಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ತನ್ನ ಮೊದಲ ರೇಡಿಯಲ್ ಟೈರ್ ಆದ ಸಿಯೆಟ್ ರಾಕ್‍ರಾಡ್ ಬಿಡುಗಡೆ ಮಾಡಿದೆ.
ಈ ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ಸಿಯೆಟ್ ಕಂಪನಿಯು ತನ್ನ ಟ್ರಕ್ ಮತ್ತು ಬಸ್ ರೇಡಿಯಲ್ (ಟಿಬಿಆರ್) ವಿಭಾಗದಲ್ಲಿ ತಂತ್ರಜ್ಞಾನ ಶಕ್ತಿಯನ್ನು ಬಲಪಡಿಸಿಕೊಂಡಿದೆ ಮತ್ತು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಬಳಸಬಹುದಾದ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ಒಂದು ಅತಿ ಬೇಡಿಕೆಯ ವಿಭಾಗಕ್ಕೆ ಪ್ರವೇಶ ಮಾಡಿದೆ. ರಾಕ್‍ರಾಡ್ ಟೈರ್ ಅನ್ನು ಒರಿಸ್ಸಾದ ಬಾರ್ ಬಿಲ್ ನಲ್ಲಿರುವ ಗಣಿಗಳಿಂದ ಹಿಡಿದು ಇಂಡೋನೇಷ್ಯಾದ ಒರಟಾದ ಭೂಪ್ರದೇಶಗಳವರೆಗೆ ವಿವಿಧ ರೀತಿಯ ಕಠಿಣ ಭೂಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಈ ಟೈರ್ ಅನ್ನು ಹೆಚ್ಚಿನ ಬಾಳಿಕೆ ಬರಲು, ಉತ್ತಮ ಗ್ರಿಪ್ ಹೊಂದಲು ಮತ್ತು ದೀರ್ಘ ಮೈಲೇಜ್ ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಭಾರಿ ಭಾರದ ವಾಹನ ಕಾರ್ಯಾಚರಣೆಗಳಿಗೆ ಸೂಕ್ತ ಆಯ್ಕೆಯಾಗಿದೆ.
ಕರ್ನಾಟಕ ಸೇರಿದಂತೆ ಪ್ರಮುಖ ಗಣಿಗಾರಿಕಾ ವಲಯಗಳಲ್ಲಿ ಇದು ಬಿಡುಗಡೆ ಆಗಿದ್ದು, ಇದು ದೀರ್ಘ ಬಾಳಿಕೆ ಬರುವುದರಿಂದ ತ್ಯಾಜ್ಯ ವಸ್ತು ಪರಿಸರ ಸೇರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಾಣಿಜ್ಯ ವಲಯಗಳಲ್ಲಿ ಸಿಯೆಟ್ ನ ಸುಸ್ಥಿರ ಕ್ರಮಗಳಿಗೆ ಬೆಂಬಲ ಒದಗಿಸುತ್ತದೆ ಎಂದು ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ