ಬೆಂಗಳೂರು : ರಾಜಾಜಿನಗರ 2ನೇ ಹಂತದ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಆಗಸ್ಟ್ 3, ಭಾನುವಾರ ಮಧ್ಯಾಹ್ನ 3-30ಕ್ಕೆ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರನ್ನು 'ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣದಾಸ್ ರಸ್ತೆಯಿಂದ ಶ್ರೀಮಠದವರೆಗೆ ಚೆಂಡೆ ವಾದ್ಯದೊಂದಿಗೆ ಹತ್ತಾರು ಭಜನಾ ಮಂಡಳಿಗಳ ಸದಸ್ಯರ ಗಾನದೊಂದಿಗೆ ಆಹ್ವಾನಿಸಲಾಗುವುದು.
ಕಾರ್ಯಕ್ರಮಗಳು : ಶ್ರೀ ವಾದಿರಾಜ ಆಚಾರ್ಯರಿಂದ "ಶ್ರೀ ವ್ಯಾಸರಾಜ ವೈಭವ" ವಿಷಯವಾಗಿ ಪ್ರವಚನ. ಭಜನಾ ಮಂಡಳಿಯವರಿಂದ ನೃತ್ಯ-ಗಾಯನ ನಂತರ ಗೋಪಿಕೃಷ್ಣನೊಂದಿಗೆ ಶ್ರೀಗಳಿಗೆ ನಾಣ್ಯ ಮತ್ತು ಧಾನ್ಯಗಳಿಂದ ತುಲಾಭಾರ, ಪುಷ್ಪವೃಷ್ಟಿ, ಶ್ರೀಪಾದಂಗಳವರಿಂದ ದರ್ಬಾರ್ ಹಾಗೂ ಆಶೀರ್ವಚನ, ಮಹಾಮಂಗಳಾರತಿ, ಪ್ರಸಾದ ವಿತರಣೆ ಈ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾದಿಗಳ ಹಾಗೂ ಮಠದ ಸಿಬ್ಬಂದಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ ಎಂದು ಶ್ರೀಮಠದ ವಿಚಾರಣಾಕರ್ತರಾದ ಸೋಸಲೆ ಪ್ರಕಾಶ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ