ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ 21ನೇ ಪದವು ಪಶ್ಚಿಮ ವಾರ್ಡಿನ ಶಕ್ತಿನಗರದ ನಾಲ್ಯಪದವಿನಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಅವರ ಸಂಪೂರ್ಣ ಸಹಕಾರದಿಂದ ನಿರ್ಮಾಣಗೊಂಡ ಆಟೋ ರಿಕ್ಷಾ ಸ್ಟ್ಯಾಂಡ್ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ದಿನನಿತ್ಯ ದುಡಿಯುವ ಆಟೋ ಚಾಲಕರದ್ದು ಶ್ರಮಿಕ ವರ್ಗವಾಗಿದ್ದು ಅವರು ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುತ್ತಾರೆ. ತಾವು ಬಿಸಿಲಲ್ಲಿದ್ದರೂ ತಮ್ಮ ಆಟೋಗಳು ನೆರಳಲ್ಲಿ ಇರಬೇಕು ಎಂದು ಬಯಸುವ ಅವರಿಗೆ ಈ ನೂತನ ರಿಕ್ಷಾ ಪಾರ್ಕ್ ಉಪಯೋಗವಾಗಲಿದೆ. ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಬಂದಿರುವ ರಿಕ್ಷಾ ಚಾಲಕ ಬಂಧುಗಳು ಸೇವೆ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ವನಿತಾ ಪ್ರಸಾದ್, ಶಕೀಲಾ ಕಾವ, ಎಚ್.ಕೆ. ಪುರುಷೋತ್ತಮ್, ಮಹೇಶ್ ಜೋಗಿ, ಕಿರಣ್ ರೈ, ಅಶ್ವಿತ್ ಕೊಟ್ಟಾರಿ, ರವಿಚಂದ್ರ, ಪ್ರಸಾದ್, ಮೋಹನ್, ಲತಾ ಕಾಮತ್, ಹಿತೇಶ್, ಸೇರಿದಂತೆ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


