ಸ್ವಾತಂತ್ರ್ಯ ದಿನಾಚರಣೆ: ಬೆಂಗಳೂರು ಮೆಡಿಕವರ್ ಆಸ್ಪತ್ರೆಯಿಂದ ರೂ 1947ರ ವಿಶೇಷ ಆರೋಗ್ಯ ಪ್ಯಾಕೇಜ್

Upayuktha
0



ಬೆಂಗಳೂರು, ವೈಟ್‌ ಫೀಲ್ಡ್‌: ಮೆಡಿಕವರ್ ಆಸ್ಪತ್ರೆ, ಬೆಂಗಳೂರು, 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಪ್ಯಾಕೇಜ್‌ನೊಂದಿಗೆ ಆಚರಿಸುತ್ತಿದೆ. ಈ ಪ್ಯಾಕೇಜ್‌ನ್ನು ಭಾರತದ ಸ್ವಾತಂತ್ರ್ಯದ ವರ್ಷವನ್ನು ಸ್ಮರಿಸುವ ಸಲುವಾಗಿ 1,947 ರೂಪಾಯಿಗೆ ನೀಡಲಾಗುತ್ತಿದೆ.


ಈ ಪ್ಯಾಕೇಜ್‌ನಲ್ಲಿ ಪ್ರಮುಖ ತಜ್ಞರಿಂದ ಉಚಿತ ಸಲಹೆ ಹೃದಯ ತಜ್ಞ, ಸಾಮಾನ್ಯ ವೈದ್ಯ, ಸ್ತ್ರೀರೋಗ ತಜ್ಞ, ಎಲುಬು ತಜ್ಞ, ಸಾಮಾನ್ಯ ಶಸ್ತ್ರಚಿಕಿತ್ಸಕ -  ಜೊತೆಗೆ ಡಯಾಗ್ನೋಸ್ಟಿಕ್‌ ಪರೀಕ್ಷೆಗಳಿಗೆ 50% ರಿಯಾಯಿತಿ ಒಳಗೊಂಡಿದೆ. ಈ ವಿಶೇಷ ಆಫರ್ ಆಗಸ್ಟ್ 15 ರಿಂದ ಸೆಪ್ಟೆಂಬರ್‌ 15 ರೆವೆರೆಗೆ ಬೆಂಗಳೂರು ಮೆಡಿಕವರ್ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.


ಸ್ವಾತಂತ್ರ್ಯ ದಿನಾಚರಣೆ ನಮ್ಮ ದೇಶದ ಹಬ್ಬ, ಆದರೆ ಉತ್ತಮ ಆರೋಗ್ಯವೇ ಬದುಕನ್ನು ಸಂಪೂರ್ಣವಾಗಿ ಅನುಭವಿಸುವ ಮೂಲ ಆಸ್ತಿಯಾಗಿದೆ. 1,947ರ ವಿಶೇಷ ಪ್ಯಾಕೇಜ್‌ ನಮ್ಮ ದೇಶ ಸ್ವಾತಂತ್ರ್ಯ ಪಡೆದ ವರ್ಷದ ಸಂಕೇತವಾಗಿದ್ದು, ಜನರು ಆರೋಗ್ಯ ತಪಾಸಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಪ್ರೇರಣೆ ನೀಡುತ್ತದೆ" ಎಂದು ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಹೇಳಿದರು.


ಮೆಡಿಕವರ್ ಆಸ್ಪತ್ರೆಯ ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಬೆಂಗಳೂರಿನ ಜನರನ್ನು ಆರೋಗ್ಯಕರ ಜೀವನದತ್ತ ತ್ವರಿತ ಹೆಜ್ಜೆ ಇಡುವಂತೆ ಪ್ರೋತ್ಸಾಹಿಸುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top