ಇಂದು ಸಂಜೆ ಶ್ರೀ ಕೃಷ್ಣಮಠಕ್ಕೆ ಇಸ್ಕಾನ್‌ನ ಗೌರಂಗದಾಸ್ ಭೇಟಿ

Upayuktha
0


ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುತ್ತಿರುವ 48 ದಿನಗಳ ಕಾಲದ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪೂಜ್ಯ ಪರ್ಯಾಯ ಶ್ರೀಪಾದರ ಆಮಂತ್ರಣದಂತೆ ಇಂದು ಇಸ್ಕಾನ್ ಸಂಸ್ಥೆಯ  ಅಂತಾರಾಷ್ಟ್ರೀಯ ಸಂಯೋಜಕರಾದ ಜನಪ್ರಿಯ ವಾಗ್ಮಿಗಳಾದ ಶ್ರೀ ಗೌರಂಗದಾಸ್ ರವರು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ.


ಶ್ರೀ ಕೃಷ್ಣ ದರ್ಶನ ಪಡೆದ ಬಳಿಕ ಅವರು ಸಾಯಂಕಾಲ 4 ಗಂಟೆಗೆ ರಾಜಾಂಗಣದಲ್ಲಿ  ಪೂಜ್ಯ ಪರ್ಯಾಯ ಶ್ರೀಪಾದರ  ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (N.M.P.A), ಮಂಗಳೂರಿನ ಚೇರ್ಮನ್ ಡಾ. ವೆಂಕಟ ರಮಣ ಅಕ್ಕರಾಜು ಮತ್ತು ಡಾ. ಮುದ್ದುಮೋಹನ್, ನಿವೃತ್ತ IAS ಅಧಿಕಾರಿಗಳು ಭಾಗವಹಿಸಲಿದ್ದಾರೆ.


ವಿಶ್ವದಾದ್ಯಂತ ಶ್ರೀಕೃಷ್ಣ ಪ್ರಜ್ಞೆಯನ್ನು ವಿಶಾಲವಾಗಿ ಜಾಗೃತಗೊಳಿಸಿದ ಶ್ರೀ ಗೌರಂಗ ದಾಸ್ ಇವರನ್ನು ಪರ್ಯಾಯ ಮಠದಿಂದ ವಿಶೇಷವಾಗಿ ಗೌರವಿಸಲಾಗುವುದು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top