SUIET ಮುಕ್ಕ, ಶ್ರೀನಿವಾಸ್ ವಿಶ್ವವಿದ್ಯಾಲಯಕ್ಕೆ IBM ಪ್ರಶಸ್ತಿ

Upayuktha
0


ಮಂಗಳೂರು: ಮಂಗಳೂರಿನ ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಗೆ ಐಬಿಎಂ ಎಕ್ಸ್‌ಪರ್ಟ್ ಲ್ಯಾಬ್ಸ್ ಅಕಾಡೆಮಿಯಾ ಉಪಕ್ರಮದ ಅಡಿಯಲ್ಲಿ "ಅತ್ಯುತ್ತಮ ಪ್ರದರ್ಶನ ನೀಡುವ ಸಂಸ್ಥೆ ಪ್ರಶಸ್ತಿ" ಲಭಿಸಿದೆ.


ಐಬಿಎಂ ಎಕ್ಸ್‌ಪರ್ಟ್ ಲ್ಯಾಬ್ಸ್ ಅಕಾಡೆಮಿಯಾ ಉಪಕ್ರಮದ ಅಡಿಯಲ್ಲಿ, ಉದ್ಯಮ ಶೈಕ್ಷಣಿಕ ಸಹಯೋಗಗಳ ಮೂಲಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಶ್ರೇಷ್ಠತೆಯನ್ನು ಸಾಧಿಸಲು, ಮತ್ತು ನಾವೀನ್ಯತೆಗೆ ಬದ್ಧತೆಯನ್ನು ಸಬಲೀಕರಣಗೊಳಿಸಲು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಾಧಿಸಿದ ಅಸಾಧಾರಣ ನಾಯಕತ್ವವನ್ನು ಗುರುತಿಸಿ, ಮಂಗಳೂರಿನ ಮುಕ್ಕದ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯನ್ನು "ಐಬಿಎಂ ಪರಿವರ್ತಕ ಪಾಲುದಾರ ಮತ್ತು ಅತ್ಯುತ್ತಮ ಪ್ರದರ್ಶನ ನೀಡುವ ಸಂಸ್ಥೆ- 2025" ಎಂದು ಗುರುತಿಸಿದೆ.


ಬೆಂಗಳೂರಿನಲ್ಲಿ ಆಯೋಜಿಸಲಾದ ಐಬಿಎಂ ಎಕ್ಸ್‌ಪರ್ಟ್ ಲ್ಯಾಬ್ಸ್ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ 2025 ಕಾರ್ಯಕ್ರಮದಲ್ಲಿ, ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮುಖ್ಯಸ್ಥ ಡಾ. ರಾಮಕೃಷ್ಣ ಎನ್ ಹೆಗಡೆ ಯವರು ಐಬಿಎಂ ಟೆಕ್ನಾಲಜಿ ಎಕ್ಸ್‌ಪರ್ಟ್ ಲ್ಯಾಬ್ಸ್, ಐಎಸ್‌ಎ, ಇದರ ರಾಷ್ಟೀಯ ಪ್ರಬಂಧಕ ಜಗದೀಶ ಭಟ್ ರವರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.


Post a Comment

0 Comments
Post a Comment (0)
To Top