ಹಿಂದೂಜಾ ಗ್ರೂಪ್: ಫಿಲಿಪೀನ್ಸ್‌ಗೆ ವಹಿವಾಟು ವಿಸ್ತರಣೆ

Chandrashekhara Kulamarva
0


ಮಂಗಳೂರು: ರಕ್ಷಣೆ, ಇಂಧನ, ವಾಹನ ತಯಾರಿಕೆ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಫಿಲಿಫೀನ್ಸ್‍ಗೆ ವ್ಯವಹಾರ ವಿಸ್ತರಿಸಲು ಹಿಂದೂಜಾ ಸಮೂಹ ನಿರ್ಧರಿಸಿದೆ.


ಭಾರತಕ್ಕೆ ಭೇಟಿ ನೀಡಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರನ್ನು ಭೇಟಿ ಮಾಡಿದ ಶೋಮ್ ಹಿಂದೂಜಾ ನೇತೃತ್ವದ ನಿಯೋಗಕ್ಕೆ ನೀಡಿದ ಅಧ್ಯಕ್ಷರು ನೀಡಿದ ಆಹ್ವಾನದ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ ಸರ್ಕಾರದ ಜೊತೆಗಿನ ತನ್ನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.


ಹಿಂದೂಜಾ ಗ್ರೂಪ್‍ನ ಪರ್ಯಾಯ ಇಂಧನ ಮತ್ತು ಸುಸ್ಥಿರತೆ ವಿಭಾಗದ ಅಧ್ಯಕ್ಷ ಮತ್ತು ಗಲ್ಫ್ ಆಯಿಲ್ ಲೂಬ್ರಿಕಂಟ್ಸ್ ಮತ್ತು ಅಶೋಕ್ ಲೇಲ್ಯಾಂಡ್‍ನ ಆಡಳಿತ ಮಂಡಳಿಯ ಸದಸ್ಯರಾಗಿರುವ ಶೋಮ್ ಹಿಂದೂಜಾ ಫಿಲಿಪೀನ್ಸ್ ಅಧ್ಯಕ್ಷರ ಜತೆಗಿನ ಸಭೆಯ ಬಳಿಕ ವಿವರ ನೀಡಿದರು.


ಬೆಳೆಯುತ್ತಿರುವ ರಕ್ಷಣಾ ವಲಯ, ಡಿಜಿಟಲ್ ತಂತ್ರಜ್ಞಾನ, ಇಂಧನ ಮತ್ತು ವಾಹನ ತಯಾರಿಕೆ- ಸ್ವಿಚ್ ಮೊಬಿಲಿಟಿಯಿಂದ ವಿದ್ಯುತ್ ಚಾಲಿತ ವಾಹನಗಳು ಮತ್ತು ಫಿಲಿಪ್ಪೀನ್ಸ್‍ನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ  ಹೆಚ್ಚಿಸಲು ಗಲ್ಫ್ ಆಯಿಲ್‍ನಿಂದ ಸಂಯೋಜಿತ ಚಾರ್ಜಿಂಗ್ ಮೂಲಸೌಲಭ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಅವಕಾಶಗಳನ್ನು ಒದಗಿಸಿದೆ ಎಂದು ಹೇಳಿದರು.


ಹಿಂದೂಜಾ ಗ್ಲೋಬಲ್ ಸೊಲ್ಯೂಷನ್ಸ್ (ಎಚ್‍ಜಿಎಸ್) ಫಿಲಿಪ್ಪೀನ್ಸ್‌ ನಲ್ಲಿ ತನ್ನ ಸ್ಥಳೀಯ ವಹಿವಾಟುಗಳನ್ನು ವಿಸ್ತರಿಸಲು ಗಮನಾರ್ಹ ಹೂಡಿಕೆಗಳನ್ನು ಮಾಡಲು ಫಿಲಿಪ್ಪೀನ್ಸ್ ಸರ್ಕಾರದ ಜೊತೆ ಇಂಗಿತ ಪತ್ರಕ್ಕೆ (ಎಲ್‍ಒಐ) ಸಹಿ ಹಾಕಿದೆ. ತನ್ನ ಜಾಗತಿಕ ವಹಿವಾಟುಗಳಿಗೆ ಬೆಳವಣಿಗೆಯ ಮಾರುಕಟ್ಟೆಯಾಗಿ ಫಿಲಿಪ್ಪೀನ್ಸ್ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ" ಎಂದು ಹೇಳಿದ್ದಾರೆ.


إرسال تعليق

0 تعليقات
إرسال تعليق (0)
To Top