ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಆಟಿ ಕೂಟ ಆಚರಣೆ

Chandrashekhara Kulamarva
0


ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಆಗಸ್ಟ್ 9ರಂದು ಆಟಿ ಕೂಟ ಆಚರಣೆ ನಡೆಯಿತು.

ತುಳುನಾಡಿನ ಆಟಿ ತಿಂಗಳು ಅಂದರೆ, ಆಷಾಢ ಮಾಸದಲ್ಲಿ ಬಳಸಲಾಗುವ ಹಸಿರು ತರಕಾರಿ, ಬೇಳೆಕಾಳುಗಳನ್ನು ಬಳಸಿ ಸಿದ್ಧಪಡಿಸಿದ ಸ್ವಾದಿಷ್ಟಪೂರ್ಣ ಊಟವನ್ನು ವಿತರಿಸಲಾಯಿತು.


ಆಟಿ ತಿಂಗಳ ಭೋಜನ, ತಿಂಡಿಗಳು, ಖಾದ್ಯ ವೈವಿಧ್ಯತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ರುಚಿಯಾದ ತಿನಿಸುಗಳು, ಪಲ್ಯ, ಚಟ್ನಿ, ಉಂಡ್ಲಕಾಳು, ಪತ್ರೊಡೆ, ಪಾಯಸ, ಇತ್ಯಾದಿ ಬಗೆಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗಿತ್ತು. ವಿದ್ಯಾರ್ಥಿಗಳು ಅನೇಕ ಕಾಯಿಪಲ್ಲೆ, ತರಕಾರಿ, ತೆಂಗಿನಕಾಯಿ, ಆಟಿಯ ತಿಂಡಿ ತಿನಿಸುಗಳನ್ನು ತಂದಿದ್ದರು.


ಶಾಲಾ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಶಿಕ್ಷಕ- ಶಿಕ್ಷಕೇತರ ವೃಂದ, ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top