ಕಾಲೇಜು ಲೈಫ್ ಇಸ್ ಗೋಲ್ಡನ್ ಲೈಫ್ ಎನ್ನುವ ಮಾತಿನಂತೆ ಕಾಲೇಜು ಜೀವನ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯಲು ಸಹಕರಿಸುವುದರೊಂದಿಗೆ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಕಟ್ಟಿಕೊಡುತ್ತದೆ. ಕಾಲೇಜು ಕೇವಲ ಶಿಕ್ಷಣಕ್ಕೆ ಸಂಬಂಧಪಟ್ಟದಲ್ಲದೆ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯವನ್ನು ಹೊರತೆಗಿಯುವಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಅದರಲ್ಲಿ ಎಲೆಕ್ಷನ್ ಕೂಡ ಒಂದು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಮತ್ತು ಪ್ರಜಾಪ್ರಭುತ್ವದ ಮನೋಭಾವನೆಯನ್ನು ಬೆಳೆಸಲು ಚುನಾವಣೆ ಸಹಕಾರಿಯಾಗಿದೆ.
ಸಂಸತ್ತು ಮತ್ತು ಕಾಲೇಜಿನಲ್ಲಿ ನಡೆಯುವ ಚುನಾವಣೆಗೆ ಅಷ್ಟೇನೂ ವ್ಯತ್ಯಾಸವಿಲ್ಲ. ಕಾಲೇಜುಗಳಲ್ಲಿ ಒಟ್ಟು 3 ಹುದ್ದೆಗಾಗಿ ಚುನಾವಣೆ ನಡೆಯುತ್ತದೆ. ಒಂದೊಂದು ವಿಭಾಗದಿಂದ ಮೂವರು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುತ್ತಾರೆ.ವಿರೋಧಿ ಪಕ್ಷಗಳು ಇಲ್ಲದೆ ಹೋದರೆ ಚುನಾವಣೆಗೆ ಯಾವುದೇ ಕಳೆ ಇರುವುದಿಲ್ಲ. ಎರಡು ಪಕ್ಷಗಳ ಜಟಾಪಟಿ ಸಂಸತ್ತಿನ ಚುನಾವಣೆಯನ್ನು ಮೀರಿಸುವಂಥದ್ದು.
ಇಲ್ಲಿಯೂ ಕೂಡ ಕೆಲವೊಂದು ನೀತಿ ನಿಯಮಗಳನ್ನು ಅಭ್ಯರ್ಥಿಗಳು ಪಾಲಿಸಬೇಕಾಗುತ್ತದೆ. ಪಾಲಿಸದಿದ್ದಲ್ಲಿ ನಾಮಪತ್ರವನ್ನು ವಜಾ ಮಾಡುವ ಸಾಧ್ಯತೆ ಇರುತ್ತದೆ. ಎಲೆಕ್ಷನ್ ಇನ್ನೇನು ಹತ್ತಿರ ಬರುತ್ತಿದೆ ಎಂದ ತಕ್ಷಣ ಭಿನ್ನಾಭಿಪ್ರಾಯ ಕಲಹಗಳು ಉಂಟಾಗುತ್ತದೆ. ಅಲ್ಲಿಯವರೆಗೂ ಜೇನುಗೂಡಿನಂತಿದ್ದ ತರಗತಿಗಳು ಒಡೆದು ಎರಡು ಭಾಗವಾಗುತ್ತದೆ. ಎಲೆಕ್ಷನ್ ದಿನದಂದು ಮೊದಲಿಗೆ ತರಗತಿಯಲ್ಲಿ ಮತ ಚಲಾಯಿಸಿ ಅಲ್ಲಿ ಗೆದ್ದಂಥ ಅಭ್ಯರ್ಥಿಗಳು ತಮ್ಮ ಪಕ್ಷದ ಮೂರು ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕಾಗುತ್ತದೆ. ಅಲ್ಲಿ ಗೆದ್ದ ಪಕ್ಷ ಮುಂದಿನ ವಿದ್ಯಾರ್ಥಿ ಸಂಘದ ನಾಯಕರಾಗುತ್ತಾರೆ.
ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ,ವಿದ್ಯಾರ್ಥಿಗೋಸ್ಕರ ನಡೆಯುವಂತ ಚುನಾವಣೆ ಆಗಿದ್ದು. ಗೆದ್ದಂಥ ಅಭ್ಯರ್ಥಿಗಳು ವಿದ್ಯಾರ್ಥಿ ಕೋರಿಕೆ ಈಡೇರಿಸುವುದರೊಂದಿಗೆ ವಿದ್ಯಾರ್ಥಿಗಳ ಏಳಿಗೆ ಜೊತೆ ಕಾಲೇಜಿನ ಅಭಿವೃದ್ಧಿಯಲ್ಲಿ ಶ್ರಮವಹಿಸಬೇಕು. ಮಾಡುವಂಥ ಒಳ್ಳೆ ಕೆಲಸಗಳು ವೋಟಿಗಾಗಿ ಮಾತ್ರ ಸೀಮಿತವಾಗಿರದೇ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಒಳ್ಳೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಆದರ್ಶ ನಾಯಕರಾಗಬೇಕೆಂಬುದೇ ನನ್ನ ಆಶಯ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


.jpg)
