ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ, ಅದ್ದಡ ಗ್ರಾಮದ ಸಿಗದಾಳ್ ಗಣೇಶೋತ್ಸವ ವಿಭಿನ್ನ ಕಾರ್ಯಕ್ರಮಗಳಿಗೆ ಹೆಸರುವಾಸಿ. ವಿಶೇಷ ಕಾರ್ಯಕ್ರಮಗಳು, ಊರಿನವರ ಪಾಲ್ಗೊಳ್ಳುವಿಕೆ, ವಿಭಿನ್ನ ಪರಿಕಲ್ಪನೆಗಳಿಂದ ಗಣೇಶೋತ್ಸವ ಆಚರಿಸಿ, ದೂರ ದೂರದ ಊರುಗಳಿಗೂ ತನ್ನ ಪ್ರಸಿದ್ದಿಯನ್ನ ಪಸರಿಸಿದೆ.
ಈ ಬಾರಿ ವಿಶೇಷ ಅಂದ್ರೆ ದಿನವೂ ರಾತ್ರಿ ನಾನೂರಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಣೆಗೆ ಪ್ಲಾಸ್ಟಿಕ್/ಪೇಪರ್ ಲೋಟ ತಟ್ಟೆ ಬಳಸದೆ ಮಲೆನಾಡಿನ ಸೊಗಡಿನ ಬಾಳೆಎಲೆ ಬಳಸಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಪರಿಸರ ಸ್ನೇಹಿ ಜೊತೆಗೆ ದಿನವೂ ಪ್ರಸಾದ ರೂಪದಲ್ಲಿ ಪ್ಲಾಸ್ಟಿಕ್ ಕಣಗಳು ಭಕ್ತರ ದೇಹ ಸೇರುವುದನ್ನ ತಪ್ಪಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ ಸೇರುವುದನ್ನು ತಪ್ಪಿಸಿದ್ದಾರೆ.
ಸಾವಿರಾರು ಜನ ಸೇರುವ ಗಣೇಶೋತ್ಸವದ ಕೊನೆಯ ದಿನದ (ಐದನೇ ದಿನಕ್ಕೆ) ಅನ್ನಸಂತರ್ಪಣೆಗೆ ಸ್ಟೀಲ್ ತಟ್ಟೆ, ಲೋಟ (ಕೊಪ್ಪ ಗಾಯತ್ರಿ ಸೊಸೈಟಿಯ ಸಹಕಾರ) ಪಡೆದು ಪ್ಲಾಸ್ಟಿಕ್/ ಪೇಪರ್ ಲೋಟ ತಟ್ಟೆ ಬಳಸದೇ ಸಾರ್ವಜನಿಕ ಕಾರ್ಯಕ್ರಮ ಆಯೋಜನೆಗೊಂಡಿದೆ.
ಹೀಗೆಲ್ಲ ಮಾಡಲು ಸಾಧ್ಯ ಅಂತ ಕೊಪ್ಪ ತಾಲೂಕಿನ, ಅದ್ದಡ ಗ್ರಾಮದ ಗಣೇಶೋತ್ಸವ ಸಮಿತಿ ಮಾಡಿ ತೊರಿಸುತ್ತಿದೆ.
ಸಮಿತಿಯವರ ಸ್ಪಂದನೆಗೆ ಊರಿನವರ ಸಹಕಾರ ಚೆನ್ನಾಗಿ ಇರುವುದರಿಂದ ಪರಿಸರ ಸ್ನೇಹಿ ಗಣೇಶೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಗಣೇಶನ ಪ್ರಸಾದವನ್ನ ಪ್ಲಾಸ್ಟಿಕ್/ ಪೇಪರ್ ತಟ್ಟೆ (ವಿಷದ ಬಟ್ಟಲಿನಲ್ಲಿ!) ಯಲ್ಲಿ ಕೊಡುವುದಿಲ್ಲ ಅನ್ನೋ ಸಮಿತಿಯ ಮತ್ತು ಊರಿನ ಜನರ ತೀರ್ಮಾನಕ್ಕೆ ನಿಮ್ಮದೊಂದು ಜೈ ಅನ್ನಿ.
ವಿಭಿನ್ನ ಕಾರ್ಯಕ್ರಮ. ದಿನವೂ ರಾತ್ರಿ ಗಣೇಶನ ಪ್ರಸಾದ ಬಾಳೆಎಲೆಯಲ್ಲಿ. ನೀವೂ ಬನ್ನಿ.
- ಅಶೋಕ ಸಿಗದಾಳ್. ಕುಮರಿಗದ್ದೆ.
6361709631
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ