ಡಾ ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ (90) ಜನ್ಮವರ್ಧಂತಿ

Upayuktha
0

ಉತ್ಸವ ಕಾರ್ಯಕ್ರಮಗಳ ಉದ್ಘಾಟನೋತ್ಸವ, ಬನ್ನಂಜೆ ಕೃತಿ, ಗಾಯನ ಸಿಡಿ ಬಿಡುಗಡೆ




ಉಡುಪಿ: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತಿ ಕಾರ್ಯಕ್ರಮಗಳ ಉದ್ಘಾಟನೋತ್ಸವ ನಡೆಯಿತು.‌ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪಜ್ವಲನಗೈದು ಬನ್ನಂಜೆ ಯವರ ಕೃತಿಗಳಿಗೆ ಆರತಿ ಬೆಳಗಿ ಉದ್ಘಾಟಿಸಿ ಸಂದೇಶ ನೀಡಿ ವರ್ಷಪೂರ್ತಿ ಜನ್ಮವರ್ಧಂತಿ ಸಮಿತಿ ಮತ್ತು ಈಶಾವಾಸ್ಯ ಪ್ರತಿಷ್ಠಾನಗಳು ಹಮ್ಮಿಕೊಂಡ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಎಂದರು.


ಬನ್ನಂಜೆಯವರ ವಾಙ್ಮಯ ಕೃತಿಗಳನ್ನು ಕಾಲಕಾಲಕ್ಕೆ ಪ್ರಕಾಶಿಸಿ ಮುಂದಿನ ಪೀಳಿಗೆಗೆ ಆ ಕೃತಿಗಳ ಮೂಲಕ ಬನ್ನಂಜೆಯವರ ವಿಚಾರದಧಾರೆಗಳನ್ನು ಉಳಿಸುವ ಕೆಲಸಕ್ಕಿಂತ ಮಿಗಿಲಾದುದಿಲ್ಲ. ಬನ್ನಂಜೆಯವರು ಪ್ರತಿಯೊಂದನ್ನೂ ವಿಮರ್ಶಿಸುತ್ತಿದ್ದರು.‌ ಇದನ್ನೇ ಗೀತೆಯಲ್ಲೂ ಕೃಷ್ಣ ಹೇಳಿದ್ದು. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ವಿಮರ್ಶಾದೃಷ್ಟಿ ಇಟ್ಟುಕೊಂಡರೆ ಪ್ರತಿಯೊಬ್ಬರೂ ಬನ್ನಂಜೆಯಾಗುತ್ತಾರೆ ಅದೂ ಅವರಿಗೆ ಸಲ್ಲಿಸುವ ಗೌರವ ಆಗುತ್ತದೆ ಎಂದು ನುಡಿದರು.



ಶ್ರೀ ಸುಶ್ರೀಂದ್ರ ತೀರ್ಥರು ಸಂದೇಶ ನೀಡಿದರು. ಶತಾವಧಾನಿ ಡಾ ರಾಮನಾಥಾಚಾರ್ಯರು ಪ್ರಧಾನ ಉಪನ್ಯಾಸಗೈದು ಬನ್ನಂಜೆಯವರ ಸಾಹಿತ್ಯ, ತತ್ವಶಾಸ್ತ್ರ, ಭಾಷಾ ಸಂಶೋಧನೆಗಳ ಅಗಾಧತೆಯನ್ನು ವಿವರವಾಗಿ ವಿಶ್ಲೇಶಿಸಿದರು.‌


ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಾಶಂಸನೆಗೈದರು. ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.


ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್, ಮಂಗಳೂರು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ ಎ ರಾಘವೇಂದ್ರರಾವ್, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್, ಶಾಸಕ ಯಶ್ಪಾಲ್ ಎ ಸುವರ್ಣ, ಇಂಜಿನಿಯರ್ ಕೆ ರಮೇಶ್ ರಾವ್ ಬೀಡು, ಶ್ರೀ ಕ್ಷೇತ್ರ ಅಂಬಲಪಾಡಿಯ ಧರ್ಮದರ್ಶಿ ಡಾ ನಿ ಬೀ ವಿಜಯ ಬಲ್ಲಾಳ್, ವಿದ್ವಾನ್ ಪಾವಂಜೆ ವಾಸುದೇವ ಭಟ್, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ ಪ್ರಸನ್ನಾಚಾರ್ಯ, ಡಾ ಬನ್ನಂಜೆಯವರ ಸುಪುತ್ರ ವಿನಯಭೂಷಣ ಆಚಾರ್ಯ ಉಪಸ್ಥಿತರಿದ್ದರು.


ಅಮೇರಿಕಾದ ದೀಪಕ್ ಕಟ್ಟೆಯವರು ಪ್ರಕಾಶಿಸಿದ ಬನ್ನಂಜೆಯವರ ಕವನಗಳ ಗಾಯನದ ಸಿಡಿ ಬಿಡುಗಡೆ ಗೊಂಡಿತು.


ಸಮಿತಿ ಪ್ರಧಾನ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.‌ ವಾರಿಜಾಕ್ಷಿ ಆರ್ ಭಟ್ ಬನ್ನಂಜೆಯವರ ಗೀತೆಯ ಗಾಯನಗೈದರು.‌ ಸಮಿತಿ ಕೋಶಾಧಿಕಾರಿ ಪ್ರಸಾದ್ ಉಪಾಧ್ಯಾಯ 


ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ತರಾದ ಬಾಲಾಜಿ ರಾಘವೇಂದ್ರಾಚಾರ್ಯರು ಪ್ರಸ್ತಾವನೆಗೈದರು.


ಸದಸ್ಯರಾದ ಅಭಿರಾಮ ತಂತ್ರಿ ಸತೀಶ್ ಕುಮಾರ್, ರಾಹುಲ್, ಪರಶುರಾಮ ಭಟ್ ವಿಘ್ನೇಶ್, ಯಾಸ್ಕ ಆಚಾರ್ಯ, ಪ್ರಶಾಂತ್ ಶೆಟ್ಟಿ, ಶ್ರೀಮಠದ ರಮೇಶ ಭಟ್, ಮಹಿತೋಶ್ ಆಚಾರ್ಯ ಸಹಕರಿಸಿದರು. 


ಅನೇಕ ಮಠಾಧೀಶರು ಹಾಗೂ ಗಣ್ಯರ ವಿಡಿಯೋ ಮತ್ತು ಪೋಸ್ಟರ್ ಸಂದೇಶಗಳನ್ನು ಎಲ್ ಇ ಡಿ ಪರದೆಯಲ್ಲಿ ಬಿತ್ತರಿಸಲಾಯಿತು. ಸಭೆಯ ಬಳಿಕ ಮೈಸೂರಿನ ಕಲಾ ಸಂದೇಶ ಪ್ರತಿಷ್ಠಾನದ ನೃತ್ಯ ವಿದ್ವಾನ್ ಸಂದೇಶ ಭಾರ್ಗವ್ ಮತ್ತು ತಂಡದವರಿಂದ ವಿಶ್ವಾಮಿತ್ರ ಗಾಯತ್ರಿ ನೃತ್ಯರೂಪಕ ಸುಂದರವಾಗಿ ಮೂಡಿಬಂದಿತು.





ನಿನ್ನೆಯ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಮೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್ ಡಿ ಕುಮಾರ ಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕಾಗೇರಿ ವಿಶ್ವೇಶ್ವರ ಹೆಗಡೆ, ಉಡುಪಿ ಜಿಲ್ಲೆಯ ಎಲ್ಲ 5 ಶಾಸಕರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್  ಮೊದಲಾದವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬನ್ನಂಜೆಯವರಿಗೆ 90 ನೇ ಜನ್ಮವರ್ಧಂತಿಯ ಗೌರವ ಪ್ರಣಾಮಗಳನ್ನು ಸಲ್ಲಿಸಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಲಕ್ಷಾಂತರ ಜನ ನಿನ್ನೆ ಬನ್ನಂಜೆಯವರನ್ನು ಸ್ಮರಿಸಿದಂತಾಗಿದೆ.


ಅದರ ಜೊತೆಗೆ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರು, ಶ್ರೀ ಪಲಿಮಾರು, ಶ್ರೀ ಭಂಡಾರಕೇರಿ, ಶ್ರೀ ಪೇಜಾವರ, ಶ್ರೀ ಕಾಣಿಯೂರು, ಶ್ರೀ ಸುಬ್ರಹ್ಮಣ್ಯ, ಶ್ರೀಪಾದರಾಜ ಮಠ, ಶ್ರೀ ಅದಮಾರು ಕಿರಿಯ ಶ್ರೀಗಳು, ಶ್ರೀ ಶೀರೂರು ಶ್ರೀಪಾದಂಗಳವರು, ಶ್ರೀ ವಜ್ರದೇಹಿ ಸಂಸ್ಥಾನದ ಸ್ವಾಮೀಜಿಯವರು ಮೊದಲಾದವರು ವಿಡಿಯೋ ಸಂದೇಶಗಳ ಮೂಲಕ ಬನ್ನಂಜೆ ಆಚಾರ್ಯರ ಹಿರಿಮೆ ಗರಿಮೆಗಳನ್ನು ಉಲ್ಲೇಖಿಸಿ ಆಚಾರ್ಯರನ್ನು ಸ್ಮರಿಸಿ ಈ ಕಾರ್ಯಕ್ರಮ ಕ್ಕೆ ಶುಭ ಸಂದೇಶಗಳನ್ನು ನೀಡಿ ಹರಸಿದ್ದಾರೆ. 

ಅವರೆಲ್ಲರಿಗೆ ವಿಶೇಷವಾದ ಧನ್ಯವಾದಗಳನ್ನು ಬನ್ನಂಜೆ ನವತಿ ಜನ್ಮವರ್ಧಂತಿ ಸಮಿತಿ ಉಡುಪಿ  ಸಲ್ಲಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top