“ರಮೇಶ್ ಅರವಿಂದ್ ಡೇ”: ಅಮೆರಿಕದ ಟೆಕ್ಸಾಸ್, ಆಸ್ಟಿನ್ ಪಟ್ಟಣದ ಜನತೆಯಿಂದ ಗೌರವ

Chandrashekhara Kulamarva
0


ಟೆಕ್ಸಾಸ್: ಅಮೆರಿಕದ ಟೆಕ್ಸೆಸ್, ಆಸ್ಟಿನ್ ನಗರದಲ್ಲಿ ನಡೆದ "ಡೇ ಆಫ್ ಗ್ರಾಟಿಟ್ಯೂಡ್ 2025" ಸಮಾರಂಭದಲ್ಲಿ ರಮೇಶ್ ಅರವಿಂದ್ ಇವರ ಜೀವನ ಅನುಭವದ -ನಟನೆ, ನಿರ್ದೇಶನ ಮತ್ತು ಸಿನಿಮಾ ಹಾಗೂ ತನ್ನ ಸ್ಪೂರ್ತಿದಾಯಕ ಮಾತುಗಳಿಂದ ಜನ-ಮಾನಸದಲ್ಲಿ ಬೆಳೆದು ನಿಂತ ಕಾರಣಕ್ಕಾಗಿ “ರಮೇಶ್ ಅರವಿಂದ್ ಡೇ” ಆಚರಿಸಿ ಅವರನ್ನು ಗೌರವಿಸಲಾಯಿತು. 


ಆಸ್ಟಿನ್ ನಗರದ "ಪ್ರೋಕ್ಲಮೇಷನ್ ಡೇ” ದಿನದಂದು ಅಲ್ಲಿನ ಮೇಯರ್, ಪ್ರೊಟೆಮ್ ವನೀಸಾ ಇವರು ಟೆಕ್ಸನ್ ಗವರ್ನರ್ ಗ್ರೆಗ್ ಅಬೌಟ್ ಅವರ ಸಂದೇಶದ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದರು.


ಗ್ರಾಟಿಟ್ಯೂಟ್ ಡೇ , ಸಂಸ್ಥಾಪಕ ಎಂ. ಜೆ. ಚಾರ್ಮನಿ ಇವರ ಸ್ವಾಗತದೊಂದಿಗೆ ಆಗಸ್ಟ್ 23 ರಂದು, ಸಾವಿರಾರು ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಆಸ್ಟಿನ್ ನಗರದ ಚೀಫ್ ಲರ್ನಿಂಗ್ ಆಫೀಸರ್, ಮೀಚಲೇ ಲಾ ಟೋರನ್ ಉಪಸ್ಥಿತರಿದ್ದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಅರವಿಂದ್, "ಈ ಕಾರ್ಯಕ್ರಮ ನನ್ನ ಜೀವನದ ಅಭೂತಪೂರ್ವ ಕ್ಷಣ. ಇದನ್ನು ನಾನು ಮರೆಯಲಾರೆ" ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top