ತುಳುನಾಡಿನ ಹಬ್ಬಗಳ ಆಚರಣೆ: ಮ್ಯಾಪ್ಸ್‌ ಕಾಲೇಜಿನಲ್ಲಿ ವಿಚಾರ ಸಂಕಿರಣ

Chandrashekhara Kulamarva
0


ಮಂಗಳೂರು: ತುಳು ಪರಿಷತ್ ವತಿಯಿಂದ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ತುಳುನಾಡಿನಲ್ಲಿ ಹಬ್ಬಗಳ ಆಚರಣೆ ಕುರಿತು ವಿಚಾರ ಚಿಂತನೆ ಆಯೋಜಿಸಲಾಗಿತ್ತು.


ತುಳು ಪರಿಷತ್ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಧಾರ್ಮಿಕ ಚಟುವಟಿಕೆಗಳು ಮತ್ತು ಜಾನಪದೀಯ ನಂಬಿಕೆ, ಆಚಾರ ವಿಚಾರಗಳೊಂದಿಗೆ ಹಬ್ಬಗಳು ಆಚರಣೆಯಾಗುತ್ತಿ ವೆ. ಸಡಗರ, ಸಂಭ್ರಮಗಳೊಂದಿಗೆ ಹಬ್ಬಗಳ ಮಹತ್ವದ ಕುರಿತು ಚಿಂತನೆಯೂ ಅಗತ್ಯವಿದೆ ಎಂದರು. ಪ್ರಕೃತಿ ಆಧಾರಿತ ಹಬ್ಬಗಳು ತುಳುನಾಡಿನ ವಿಶೇಷವಾಗಿದ್ದು ಇಂದಿಗೂ ಆಚರಣೆಗಳು ಮುಂದುವರಿಯುತ್ತಿದೆ ಎಂದರು.


ತುಳು ಪರಿಷತ್‌ನ ಗೌರವ ಅಧ್ಯಕ್ಷ ಸಾಹಿತಿ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ, ಪ್ರಾದೇಶಿಕ ಅನನ್ಯತೆಗಳೊಂದಿಗೆ ಹಬ್ಬಗಳ ಆಚರಣೆ ಮಾಡಿದಾಗ ಹೆಚ್ಚು ಅರ್ಥಪೂರ್ಣ ವಾಗುತ್ತದೆ. ಸಾಂಸ್ಕತಿಕವಾಗಿ ಮುನ್ನಲೆಯಲ್ಲಿ ಇರುವ ಇಲ್ಲಿಯ ಹಬ್ಬಗಳು ವೈವಿಧ್ಯಮಯವಾಗಿವೆ ಎಂದರು.


ತುಳು ಪರಿಷತ್‌ನ ಅಧ್ಯಕ್ಷ ಶುಭೋದಯ ಆಳ್ವಾ ಮಾತನಾಡಿ, ಕೃಷಿ ಪ್ರಧಾನ ವ್ಯವಸ್ಥೆಯ ಹಿನ್ನೆಲೆಯೊಂದಿಗೆ ತುಳುನಾಡಿನಲ್ಲಿ ಹಬ್ಬದ ಆಚರಣೆಗಳು ನಡೆಯುತ್ತಿದ್ದು ವಿಶಿಷ್ಟ ಕ್ರಮಗಳು ರೂಢಿಗತವಾಗಿದೆ ಎಂದರು. ಲೇಖಕಿ ಸುಧಾ ನಾಗೇಶ್, ಅಮಿತಾ ಅಶ್ವಿನ್ ಉಲ್ಲಾಳ್, ದುರ್ಗಾ ಪ್ರಸಾದ್, ಬಿ. ಶ್ರೀನಿವಾಸ್ ಚರ್ಚೆಯಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯದ ನೆಲೆಗಟ್ಟಿನಲ್ಲಿ ಹಬ್ಬಗಳ ಆಚರಣೆ ನಡೆಯುತ್ತಿದೆ ಎಂದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top