ಇಂಡಿಯಾ ಸರಣಿಗೆ ಆಯ್ಕೆಯಾದ ಕರ್ನಾಟಕ ವೀಲ್‌ಚೇರ್ ಕ್ರಿಕೆಟ್ ಆಟಗಾರರು

Upayuktha
0



ಬೆಂಗಳೂರು: ಭಾರತವನ್ನು ಪ್ರತಿನಿಧಿಸುವ ಗೌರವಕ್ಕೆ ಕರ್ನಾಟಕದ ವೀಲ್‌ಚೇರ್ ಕ್ರಿಕೆಟ್ ತಂಡದ ಐದು ಆಟಗಾರರು ಹಾಗೂ ಒಬ್ಬ ಕೋಚ್ ಆಯ್ಕೆಯಾಗಿದ್ದಾರೆ. ತಮಿಳುನಾಡು ವೀಲ್‌ಚೇರ್ ಕ್ರಿಕೆಟ್ ಅಸೋಸಿಯೇಶನ್ ಮತ್ತು ವೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಅಯೋಜಿತ ಆಗಸ್ಟ್ 7 ರಿಂದ 9ರ ತನಕ ಅಮ್ಮ ಕ್ರಿಕೆಟ್ ಮೈದಾನ, ಮೆಲ್ಮಾರುವತೂರು, ಚೆನ್ನೈ ಇಲ್ಲಿ ನಡೆಯುವ ರಾಷ್ಟ್ರೀಯ ವೀಲ್‌ಚೇರ್ ಕ್ರಿಕೆಟ್ ಇಂಡಿಯಾ ಸರಣಿಯಲ್ಲಿ ಭಾಗವಹಿಸಲಿದ್ದಾರೆ.


ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳು:

ಭಾರತ ಎ : ಶಿವ ಪ್ರಸಾದ್, ಸಾಗರ್ ಲಮಾಣಿ

ಭಾರತ ಬಿ : ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಕಲ್ಲಾ, ಶಶಿ ಕುಮಾರ್

ಕೋಚ್ (ಭಾರತ ಎ): ಕೆವಿನ್ ಸೈಮನ್

ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿಯ ಬೆಂಬಲ:

ಆಯ್ಕೆಯಾದ ಆಟಗಾರರಿಗೆ ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿಯು ತಾಂತ್ರಿಕ ಮತ್ತು ಪ್ರೇರಣಾತ್ಮಕ ಬೆಂಬಲವನ್ನು ನೀಡುತ್ತಿದೆ. ಇದು ವಿಭಿನ್ನ ಸಾಮರ್ಥ್ಯಗಳಿರುವ ಕ್ರೀಡಾಪಟುಗಳನ್ನು ಶಕ್ತಿಗೊಳಿಸಿ ಪ್ರತಿಭೆಯನ್ನು ಗುರುತಿಸಲು ಸಂಸ್ಥೆಯ ಧ್ಯೇಯವಾಗಿರುತ್ತದೆ.


ಭಾರತದ ಪರವಾಗಿ ಆಡಲಿರುವ ಕರ್ನಾಟಕದ ಪ್ರತಿನಿಧಿಗಳಿಗೆ ಹಾರ್ದಿಕ ಅಭಿನಂದನೆಗಳು ಎಂದು ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿಯ ಸಹ ಸಂಸ್ಥಾಪಕ ದಿಲೀಪ್ ಕುಮಾರ್ ತಿಳಿಸಿದ್ದಾರೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top