ಗುರುರಾಯರ 354ನೇ ಆರಾಧನಾ ಮಹೋತ್ಸವ

Upayuktha
0

ಭಕ್ತರಿಗಾಗಿ ಜಯನಗರದ ರಾಯರ ಮಠದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ


ಬೆಂಗಳೂರು : 'ಕಲಿಯುಗ ಕಾಮಧೇನು ' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಸಪ್ತರಾತ್ರೋತ್ಸವದ ಮಹೋತ್ಸವವನ್ನು ಅತ್ಯಂತ ಸಂಭ್ರಮ ವೈಭವದಿಂದ ಆಚರಿಸಲು ಪರಮಪೂಜ್ಯ  ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಗ್ರಹದ ಮೇರೆಗೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀಮಠದ ಸಿಬ್ಬಂದಿಗಳ ಸ್ವಯಂ ಸೇವಕರ ಮತ್ತು ಭಕ್ತರ ಸಹಕಾರದೊಂದಿಗೆ  ನೆರವೇರಲಿದೆ. 


ಇತ್ತೀಚೆಗೆ ಸ್ವಯಂ ಸೇವಕರ ಸಭೆಯಲ್ಲಿ  ವಿಶೇಷ ಮಾಹಿತಿಗಳನ್ನು ಚರ್ಚಿಸಲಾಗಿ ಒಂದು ವಾರಗಳ ಕಾಲ ನಡೆಯುವ ಸಪ್ತರಾತ್ರೋತ್ಸವ "ಆರಾಧನಾ"  ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸನ್ನಿಧಿಗೆ ಆಗಮಿಸುವುದರಿಂದ ಪೋಲಿಸ್ ಬಂದೋ ಬಸ್ತ್  ವ್ಯವಸ್ಥೆಗಾಗಿ ಕೋರಲಾಗಿದೆ ಹಾಗೂ ಭಕ್ತರಿಗಾಗಿ  ಗುರು ರಾಯರ ದರ್ಶನ ಪಡೆಯಲು ಮತ್ತು ಪ್ರಸಾದವನ್ನು ಸ್ವೀಕರಿಸಲು ಅಚ್ಚುಕಟ್ಟಾದ (ಕ್ಯೂ ಸಿಸ್ಟಮ್ಸ್ )ಸಾಲಾಗಿ ಬರಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಹಾಗೂ  ಗುರುರಾಯರ ಸೇವೆಗಾಗಿ ಭಕ್ತರೊಬ್ಬರ ಸಹಕಾರದಿಂದ  ಹೊರಬಾಗಿಲಿನ ಮುಂಭಾಗದ ದ್ವಾರದ ಬಲಭಾಗದಲ್ಲಿ ಎಲ್ ಇ ಡಿ ಬಿಗ್ ಸ್ಕ್ರೀನ್ ನಲ್ಲಿ ಗುರುರಾಯರ ದರ್ಶನ ಪಡೆಯಲು ಭಕ್ತರಿಗಾಗಿ ಅಳವಡಿಸಲಾಗುತ್ತಿದೆ ಎಂದು ಆರ್ ಕೆ ವಾದಿಂದ್ರಾಚಾರ್ಯರು  ತಿಳಿಸಿದರು. 


ಈ ಆರಾಧನಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಧಾರ್ಮಿಕ ಕಾರ್ಯಕ್ರಮಗಳು : ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ  ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ಆಗಸ್ಟ್ 6 ರಿಂದ 8ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ "ಶ್ರೀಮದ್ರಾಮಾಯಣ" ಪ್ರವಚನ. ಆಗಸ್ಟ್ 8 ರಂದು ಸಂಜೆ 6:30ಕ್ಕೆ  ಶ್ರೀಪಾದಂಗಳವರಿಂದ "ಆರಾಧನಾ" ಸಪ್ತರಾತ್ರೋತ್ಸವದ "ಉದ್ಘಾಟನೆ", ಗೋಪೂಜೆ ಶ್ರೀ ಲಕ್ಷ್ಮೀ ಪೂಜೆ, ಧನ ಧಾನ್ಯ ಪೂಜೆ ನೆರವೇರಲಿದೆ.


ಆಗಸ್ಟ್ 9 ರಂದು ಬೆಳಿಗ್ಗೆ 6ಕ್ಕೆ ಋಗ್ವೇದ, ಯಜುರ್ವೇದ ಹಾಗೂ ನೂತನ ಉಪಾಕರ್ಮ ನಂತರ ಹುಣ್ಣಿಮೆಯ ಪ್ರಯುಕ್ತ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 7-00ಕ್ಕೆ) ಆಗಸ್ಟ್ 9- ಜಯತೀರ್ಥ ತಾಸಗಾಂವ್ ಮತ್ತು ಸಂಗಡಿಗರಿಂದ "ದಾಸವಾಣಿ", ಆಗಸ್ಟ್ 10-ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ", ಆಗಸ್ಟ್ 11-ದೀಪಾ ಕಾಸರವಳ್ಳಿ ಮತ್ತು ಸಂಗಡಿಗರಿಂದ "ದಾಸ ತರಂಗಿಣಿ", ಆಗಸ್ಟ್ 12-ಮೈಸೂರಿನ ರಮಾಮಣಿ ಗುರುಪ್ರಸಾದ್ ಮತ್ತು ಸಂಗಡಿಗರಿಂದ "ದಾಸಝೇಂಕಾರ", ಆಗಸ್ಟ್ 13-ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ "ದಾಸಲಹರಿ", ಆಗಸ್ಟ್ 14-ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್ ನ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ".


ರಾಜಬೀದಿ ಉತ್ಸವ : ಆಗಸ್ಟ್ 12, ಬೆಳಗ್ಗೆ 8-00ಕ್ಕೆ ಜಯನಗರದ ರಾಜಬೀದಿಯಲ್ಲಿ ಶ್ರೀ ಗುರುರಾಜರ ಮಹಾರಥೋತ್ಸವವೂ ನೆರವೇರಲಿದೆ ಎಂದು ನಂದಕಿಶೋರ ಆಚಾರ್ಯರು ತಿಳಿಸಿದ್ದಾರೆ. ಈ ಆರಾಧನಾ ಸಂದರ್ಭದಲ್ಲಿ ಗುರುರಾಯರ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು ಶ್ರೀಮಠದ ಆನ್ಲೈನ್ ಈ ವಾಟ್ಸಪ್ 9449133929 ನಂಬರ್ ಮುಖಾಂತರ ಸೇವೆ ಸಲ್ಲಿಸಿ ರಾಯರ  ಶೇಷ ವಸ್ತ್ರ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ರಾಯರ ಪೂಜೆಯಲ್ಲಿ ಭಾಗವಹಿಸಿ ಗುರುರಾಯರ ಮಹಾರಥೋತ್ಸವ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ  ಪಾತ್ರರಾಗಬಹುದು,


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top